ನಾಪೋಕ್ಲು, ನ. 20: ಗ್ರಾಮೀಣ ಕ್ರೀಡಾ ಕೂಟಗಳನ್ನು ಆಯೋಜಿಸು ವದರಿಂದ ಪರಸ್ಪರ ಬಾಂಧವ್ಯ ವೃದ್ಧಿಸಲು ಸಹಕಾರಿ ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ಹೇಳಿದರು. ಪಾರಾಣೆ ಕೇಂದ್ರ ಕ್ರೀಡಾಮಂಡಳಿ ವತಿಯಿಂದ ಪಾರಾಣೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕ್ರೀಡಾಮಂಡಳಿಯ 58ನೇ ವಾರ್ಷಿಕೋತ್ಸವ ಹಾಗೂ ಅಂತರ ಗ್ರಾಮ ಕ್ರೀಡಾಕೂಟದ ಸಮಾರಂಭ ದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಪಾರಾಣೆ ಕೇಂದ್ರ ಕ್ರೀಡಾ ಮಂಡಳಿಯು ಪ್ರತಿವರ್ಷ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸು ತ್ತಿರುವದು ಸಂತೋಷದ ವಿಚಾರ ವಾಗಿದ್ದು, ತೆರೆಯ ಮರೆಯಲ್ಲಿರುವ ಗ್ರಾಮೀಣ ಕ್ರೀಡಾ ಪ್ರತಿಭೆಗಳು ಬೆಳಕಿಗೆ ಬರಲು ಇಂತಹ ಕ್ರೀಡಾಕೂಟಗಳಿಂದ ಸಾಧ್ಯ. ಎಂದರು. ಕೊಣಂಜಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಿತಾ ತಮ್ಮಯ್ಯ ಧ್ವಜಾರೋಹಣವನ್ನು ನೆರವೇರಿಸಿ ಅಂತರಗ್ರಾಮ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು. ಪೆಬ್ಬಾಟಂಡ ಪೆಮ್ಮಯ್ಯ ಕ್ರೀಡಾಕೂಟ ವನ್ನು ಉದ್ಘಾಟಿಸಿದ್ದು, ಕ್ರೀಡಾ ಮಂಡಳಿ ಅಧ್ಯಕ್ಷ ಪಾಡೆಯಂಡ ಕಟ್ಟಿ ಕುಶಾಲಪ್ಪ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನೆರವೇರಿತು.
ಬಲಮುರಿ ಗ್ರಾಮ ಪ್ರಥಮ ಸ್ಥಾನ, ಕಿರುಂದಾಡು ಗ್ರಾಮ ದ್ವಿತೀಯ ಸ್ಥಾನ ಗಳಿಸಿದೆ. ಬಲಮುರಿ, ಕಿರುಂದಾಡು, ಬಾವಲಿ, ಕೈಕಾಡು, ಮತ್ತು ಕೊಣಂಜಗೇರಿ ಗ್ರಾಮಗಳ ಗ್ರಾಮಸ್ಥರು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದು ಹಾಕಿ ಪಂದ್ಯಾಟದಲ್ಲಿ ಬಾವಲಿ ಗ್ರಾಮದ ತಂಡವು ಪ್ರಥಮ ಸ್ಥಾನ, ಕಿರುಂದಾಡು ಗ್ರಾಮದ ತಂಡ ದ್ವಿತೀಯ ಸ್ಥಾನ ಗಳಿಸಿತು. ವಾಲಿಬಾಲ್ ಪಂದ್ಯದಲ್ಲಿ ಕಿರುಂದಾಡು ತಂಡ ಪ್ರಥಮ ಸ್ಥಾನ ಗಳಿಸಿದರೆ, ಬಲಮುರಿ ತಂಡ ದ್ವಿತೀಯ ಸ್ಥಾನ ಗಳಿಸಿತು. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಬಲಮುರಿ ತಂಡ ಪ್ರಥಮ ಸ್ಥಾನ ಹಾಗೂ ಕೈಕಾಡು ತಂಡ ದ್ವಿತೀಯ ಸ್ಥಾನ ಗಳಿಸಿತು. ತೆಂಗಿನಕಾಯಿಗೆ ಗುಂಡು ಹೊಡೆ ಯುವದು, ಥ್ರೋಬಾಲ್, ಟೆನ್ನಿಕಾಯಿಟ್, ಜಾವಲಿನ್ ಥ್ರೋ ಹೈಜಂಪ್, ಲಾಂಗ್‍ಜಂಪ್ ಹಾಗೂ ವಿವಿಧ ಓಟದ ಸ್ಪರ್ಧೆಗಳಲ್ಲಿ ಅಧಿಕ ಸಂಖ್ಯೆಯ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಈ ಸಂದರ್ಭ ದೇವಜನ ಎಸ್. ಧನೇಶ್, ಬೊಳ್ಳಂಡ ದಿಲಿ, ಬೊಳ್ಳಚೆಟ್ಟೀರ ಜಯಂತಿ, ಬೊಳ್ಳಚೆಟ್ಟೀರ ಮೈನಾ ಕಾಳಪ್ಪ, ದತ್ತಿನಿಧಿ ಅಧ್ಯಕ್ಷ ಬೊಳಕಾರಂಡ ಡಾಲಿ ಮಂದಣ್ಣ, ಬೊಳ್ಳಚೆಟ್ಟೀರ ವಿಜಯಚೆಟ್ಟಿಚ್ಚ, ಕಟ್ರತನ ಬೆಳ್ಯಪ್ಪ, ಬಾಚಮಂಡ ಲವ ಚಿಣ್ಣಪ್ಪ, ಕೇಟೋಳಿರ ಹರೀಶ್‍ಪೂವಯ್ಯ, ಕೆ.ಕೆ. ಪೂವಣ್ಣ, ಪಿ.ಆರ್. ಮಂಜು, ಯನ್.ಕೆ. ಪ್ರಭು, ಕಸ್ತೂರಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಕ್ರೀಡಾಪmುಗಳಾದ ಗ್ರಾಮದ ಪಳಂಗಂಡ ಅಮರ್ ಅಯ್ಯಮ್ಮ, ಕೆಟ್ಟೇಟಿರ ರೇಷ್ಮಾ ದೇವಯ್ಯ, ಸ್ಪೋಟ್ರ್ಸ್ ಅಡ್ಮಿನಿಸ್ಟ್ರೇಟಿವ್ ಆಫ್ ಇಂಡಿಯಾದ ಫಿಟ್‍ನೆಸ್ ಪುರಸ್ಕøತ ಕಟ್ರತನ ಬೆಳ್ಯಪ್ಪ ಅವರನ್ನು ಸನ್ಮಾನಿಸಲಾಯಿತು.
-ದುಗ್ಗಳ