ಮಡಿಕೇರಿ, ನ.18 : ಕೇಂದ್ರ ಸರ್ಕಾರದಿಂದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಖಾಂತರ ಅನುಷ್ಠಾನಗೊಳಿಸÀಲಾಗುತ್ತಿರುವ “ಸಖಿ ಒನ್ ಸ್ಟಾಪ್ ಸೆಂಟರ್”ಗೆ 2019ರ ಆಗಸ್ಟ್ 19 ರಂದು ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ಸರ್ಕಾರದ ಆದೇಶದಂತೆ ಅರ್ಜಿ ಆಹ್ವಾನಿಸಿದ ಪೈಕಿ ಕೌನ್ಸಿಲರ್ 1 ಹುದ್ದೆ, ವಿಷಯ ನಿರ್ವಾಹಕರು-3 ಹುದ್ದೆ, ತಾಂತ್ರಿಕ ಸಿಬ್ಬಂದಿ-2 ಹುದ್ದೆ, ರಕ್ಷಕರು-3 ಹುದ್ದೆ, ಮಹಿಳಾ ಸಹಾಯಕರು-2 ಹುದ್ದೆಗಳನ್ನು ರದ್ದುಪಡಿಸಿರುವದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.