ಮಡಿಕೇರಿ, ನ. 18: ಅಯ್ಯಂಗೇರಿ ಗ್ರಾಮದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಯಾವದೇ ಕಾಮಗಾರಿಗಳು ನಡೆದಿಲ್ಲ, ಅಲ್ಲದೇ ರಸ್ತೆಗಳು ಗುಂಡಿ ಮಯವಾಗಿದೆ. ಅಯ್ಯಂಗೇರಿ ಗ್ರಾಮ ಪಂಚಾಯಿತಿ ವಿಶೇಷ ಗ್ರಾಮ ಸಭೆ ಕರೆದು ಕಾಮಗಾರಿ ಆರಂಭಿಸದಿದ್ದಲಿ,್ಲ ಗ್ರಾಮಸ್ಥರೆಲ್ಲರೂ ಸೇರಿ ಆಹೋರಾತ್ರಿ ಧರಣಿ ನಡೆಸಲಾಗುವದೆಂದು ಯುವ ಕಾಂಗ್ರೆಸ್ ಮುಖಂಡ ಅಯ್ಯಂಗೇರಿ ರಾಶಿದ್ ಎಚ್ಚರಿಕೆ ನೀಡಿದ್ದಾರೆ..
ಜಿಲ್ಲಾ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಅಯ್ಯಂಗೇರಿ ಗ್ರಾಮ ಪಂಚಾಯಿತಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಯುವ ಕಾಂಗ್ರೆಸ್ ಕಾರ್ಯಕರ್ತರು ಪಂಚಾಯಿತಿ ಅಧ್ಯಕ್ಷರಿಗೆ ಹಾಗೂ ಅಭಿವೃದ್ಧಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭ ಯುವ ಕಾಂಗ್ರೆಸ್ ಕಾರ್ಯಕರ್ತರುಗಳಾದ ಮನ್ಸೂರ್, ಅಬ್ದುರಹಮಾನ್, ಜಲೀಲ್, ಶಾಹಿದ್, ಅಯ್ಯಂಗೇರಿ ಕಾಂಗ್ರೆಸ್ ಮುಖಂಡ ಬಡುವಂಡ್ರ ಮೊೈದು ಇದ್ದರು.