ಸೋಮವಾರಪೇಟೆ, ನ. 19: ಇಲ್ಲಿನ ಲಯನ್ಸ್ ಕ್ಲಬ್ ವತಿಯಿಂದ ಅಂಗಾಂಗ ದಾನದ ಬಗ್ಗೆ ಪಟ್ಟಣದಲ್ಲಿ ಸಾರ್ವಜನಿಕ ಜಾಗೃತಿ ಜಾಥಾ ನಡೆಯಿತು.

ವಿಶ್ವಮಾನವ ಕುವೆಂಪು ಶಾಲೆ, ಸಂತ ಜೋಸೆಫರ ಶಾಲೆ, ಜ್ಞಾನವಿಕಾಸ ಶಾಲೆ, ಸಾಂದೀಪನಿ ಹಾಗೂ ಚಾಣಕ್ಯ ಕಾಲೇಜಿನ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡು, ಸಾರ್ವಜನಿಕರರಿಗೆ ಕರಪತ್ರಗಳನ್ನು ವಿತರಿಸುವ ಮೂಲಕ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಿದರು.

ನಂತರ ಮಹಿಳಾ ಸಮಾಜದಲ್ಲಿ ನಡೆದ ಸಭೆಯಲ್ಲಿ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಸತೀಶ್‍ಕುಮಾರ್ ಮಾತನಾಡಿ, ಅಂಗಾಂಶಗಳ ಕೊರತೆಯಿಂದ ಕೇವಲ 3ರಿಂದ 4 ಸಾವಿರ ಜನಕ್ಕೆ ಕಸಿ ಸೌಲಭ್ಯ ಸಿಗುತ್ತಿದೆ ಎಂದರು.

ಲಯನ್ಸ್ ಅಧ್ಯಕ್ಷ ಎಂ.ಎ. ಹರೀಶ್ ಮಾತನಾಡಿದರು. ವೇದಿಕೆಯಲ್ಲಿ ಲಯನ್ಸ್ ಕಾರ್ಯದರ್ಶಿ ಕೆ.ಎನ್. ತೇಜಸ್ವಿ, ಪದಾಧಿಕಾರಿಗಳಾದ ಎ.ಎಸ್. ಮಹೇಶ್, ಜೆ.ಸಿ. ಶೇಖರ್, ಲೀಲಾರಾಂ, ಜಗದೀಶ್, ಜಲಜಾ ಶೇಖರ್, ಉಷಾ ತೇಜಸ್ವಿ, ರಾಮಚಂದ್ರ, ಶಿವಕುಮಾರ್, ಕಾವೇರಪ್ಪ, ಮುಖ್ಯ ಶಿಕ್ಷಕಿ ಮಿಲ್‍ಡ್ರೆಡ್ ಗೊನ್ಸಾಲ್ವೆಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವೀರಾಜಪೇಟೆ : ಸ್ವಯಂ ಪ್ರೇರಿತವಾಗಿ ಅಂಗದಾನ ಮಾಡುವದರಿಂದ ಜನರ ಜೀವದ ರಕ್ಷಣೆ ಸಾಧ್ಯ, ಅಂಗಾಂಗ ಕಸಿ ಆಧುನಿಕ ವೈದ್ಯಕೀಯ ವಿಜ್ಞಾನದ ಸಾಧನೆ ಯಾಗಿದ್ದು, ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಲಯನ್ಸ್ ಕ್ಲಬ್ ಕಾರ್ಯ ಶ್ಲಾಘನೀಯ ಎಂದು ವೀರಾಜಪೇಟೆ ಠಾಣಾಧಿಕಾರಿ ಮರಿಸ್ವಾಮಿ ಅಭಿಪ್ರಾಯಪಟ್ಟರು.

ಜಿಲ್ಲಾ ಲಯನ್ಸ್ ಕ್ಲಬ್ ಹಾಗೂ ವೀರಾಜಪೇಟೆ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಅಂಗದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ; ಅಂಗಾಂಗಗಳ ವೈಪಲ್ಯತೆಯಿಂದ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬರೂ ಅಂಗ ದಾನಿಯಾಗಿ ಎಂದು ಸಲಹೆ ನೀಡಿದರು.

ಗೋಣಿಕೊಪ್ಪ, ಸಿದ್ದಾಪುರ, ಪಾಲಿಬೆಟ್ಟ ವೀರಾಜಪೇಟೆ ಲಯನ್ಸ್ ಕ್ಲಬ್‍ನ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಈ ಸಂದರ್ಭ ಕಾರ್ಯಕ್ರಮದಲ್ಲಿ ಲಯನ್ ಪೌಲ್ ಕ್ಷೇವಿಯಾರ್, ಎ.ಎ.ಅಜಿತ್, ಖಜಾಂಚಿ ಲಯನ್ ಎಂ.ಎಂ. ಸುರೇಶ್, ಸದಸ್ಯರಾದ ಪ್ರತಾಪ್, ಅಮ್ಮುಣಿಚಂಡ ಪ್ರವೀಣ್, ಕರ್ನಂಡ ಸೋಮಯ್ಯ, ಹಾಗೂ ಲಯನ್ಸ್ ಕ್ಲಬ್‍ನ ಪದಾಧಿಕಾರಿಗಳು ಹಾಜರಿದ್ದರು.

ವೀರಾಜಪೇಟೆ: ವೀರಾಜಪೇಟೆ ಲಯನ್ಸ್ ಕ್ಲಬ್ ವತಿಯಿಂದ ‘’ಅಂಗದಾನ ಮಾಡಿ ಇನ್ನೊಂದು ಜೀವಕ್ಕೆ ಉಡುಗೆ ನೀಡಿ’’ ಎಂದು ಅಂಗದಾನಿಗಳ ಹೆಸರು ನೋಂದಾಯಿಸುವ ಕಾರ್ಯಕ್ರಮಕ್ಕೆ ಇಂದು ಇಲ್ಲಿನ ಮೂರ್ನಾಡು ರಸ್ತೆ ಜಂಕ್ಷನ್‍ನಲ್ಲಿ ಚಾಲನೆ ನೀಡಲಾಯಿತು.

ಈ ಸಂದರ್ಭ ವೀರಾಜಪೇಟೆ ಲಯನ್ಸ್ ಕ್ಲಬ್ ಅಧ್ಯಕ್ಷ ಪೌಲ್ ಕ್ಷೇವಿಯಾರ್ ಮಾತನಾಡಿದರು.ಹೆಚ್ಚಿನ ಮಾಹಿತಿಗಾಗಿ ಲಯನ್ಸ್ ಕ್ಲಬ್ ವೀರಾಜ ಪೇಟೆಯಲ್ಲಿ ಸಂಪರ್ಕಿಸಬಹುದು ಎಂದು ಕಾರ್ಯದರ್ಶಿ ಎ.ಎ.ಅಜೀತ್ ಹೇಳಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಉಪಾಧ್ಯಕ್ಷ ನಿಯಾಜ್, ಮಾಜಿ ಅಧ್ಯಕ್ಷ ತ್ರಿಶೂ ಗಣಪತಿ, ಕೆ. ರತನ್ ಮಾದಪ್ಪ, ಪಟ್ಟಡ ವಿಕ್ರಮ್ ಚಂಗಪ್ಪ, ಅಂಬಿ ಕೃಷ್ಣ ಮೂರ್ತಿ, ಡಿಹೆಚ್‍ಎಸ್ ಮೈದು, ಲಯನೆಸ್ ಪ್ರಥಮ ಮಹಿಳೆ ಸೋನಿ ಪೌಲ್, ಲ,ರಿಷ್ಮ ಹಾಗೂ ಪಿ.ಪ್ರತಾಪ್ ಚಿಣ್ಣಪ್ಪ ಹಾಗೂ ನಿರ್ಮಲ ರಮಣ ನರ್ಸಿಂಗ್ ಸ್ಕೂಲ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಗೋಣಿಕೊಪ್ಪ ವರದಿ: ಲಯನ್ಸ್ ಕ್ಲಬ್, ಅಪೊಲೊ ಆಸ್ಪತ್ರೆ ಸಹಯೋಗ ದಲ್ಲಿ ಆಯೋಜಿಸಿದ್ದ ಅಂಗಾಂಗ ದಾನ ನೋಂದಣಿ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ದಕ್ಷಿಣ ಕೊಡಗಿನ ಅಮ್ಮತ್ತಿ, ಪಾಲಿಬೆಟ್ಟ, ಗೋಣಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಆಯಾ ಭಾಗಗಳಲ್ಲಿ ನಡೆದ ನೋಂದಣಿ ಕಾರ್ಯಕ್ರಮದಲ್ಲಿ 200 ಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡರು.

ಗೋಣಿಕೊಪ್ಪ ಭಾಗದಲ್ಲಿ 110, ಅಮ್ಮತ್ತಿಯಲ್ಲಿ 50, ಪಾಲಿಬೆಟ್ಟದಲ್ಲಿ 50 ಜನರು ನೋಂದಣಿ ಮಾಡಿಕೊಂಡರು. ಮಧ್ಯಾಹ್ನವರೆಗೆ ಮಾತ್ರ ನೋಂದಣಿಗೆ ಅವಕಾಶವಿದ್ದ ಕಾರಣ, ಆಸಕ್ತರು ನಂತರದ ಸಮಯದಲ್ಲಿ ಬಂದು ಹಿಂತಿರುಗಿದರು. ಲಯನ್ಸ್ ಕ್ಲಬ್ ಸದಸ್ಯರುಗಳು ಜನರಿಗೆ ದಾನದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸಿದರು. ಪ್ರಾಥಮಿಕ ಪ್ರಯತ್ನದಲ್ಲಿ ಜನರು ಸ್ವ ಇಚ್ಚೆಯಿಂದ ನೋಂದಣಿಗೆ ಪಾಲ್ಗೊಂಡರು.

ಅಮ್ಮತ್ತಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಜ್ಯೋತಿ ಪೊನ್ನಪ್ಪ, ಕಾರ್ಯದರ್ಶಿ ಸವಿತಾ ಬೋಪಣ್ಣ, ಖಜಾಂಚಿ ರಕ್ಷಿತ್ ಅಯ್ಯಪ್ಪ, ಗೋಣಿಕೊಪ್ಪ ಅಧ್ಯಕ್ಷ ನಿತಿ ಪೂಣಚ್ಚ, ಕಾರ್ಯದರ್ಶಿ ಅಮ್ಮಂಡ ಚಿಣ್ಣಪ್ಪ, ಪಾಲಿಬೆಟ್ಟ ಅಧ್ಯಕ್ಷೆ ಕನ್ನಿಕಾ ಅಯ್ಯಪ್ಪ ಪಾಲ್ಗೊಂಡಿದ್ದರು.

ಕುಶಾಲನಗರ: ಕುಶಾಲನಗರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಅಂಗಾಂಗ ದಾನ ಕಾರ್ಯಕ್ರಮ ನೋಂದಾವಣೆಗೆ ಚಾಲನೆ ನೀಡಲಾಯಿತು. ಮಡಿಕೇರಿ ಡಿವೈಎಸ್ಪಿ ದಿನೇಶ್ ಕುಮಾರ್ ಚಾಲನೆ ನೀಡಿದರು.

ಕುಶಾಲನಗರ ಪಟ್ಟಣದ ಕಾರು ನಿಲ್ದಾಣ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸುಮಾರು 50ಕ್ಕೂ ಅಧಿಕ ಮಂದಿ ಅಂಗ ದಾನಿಗಳು ನೋಂದಾಯಿಸಿಕೊಂಡರು.

ಲಯನ್ಸ್ ಕ್ಲಬ್ ಕುಶಾಲನಗರದ ಅಧ್ಯಕ್ಷರಾದ ಕೊಡಗನ ಹರ್ಷ, ಕಾರ್ಯದರ್ಶಿ ಪೊನ್ನಚ್ಚನ ಮೋಹನ್, ಪ್ರಮುಖರಾದ ಶಶಿಕುಮಾರ್, ನಾಗರಾಜ್, ಹರಿಣಿ, ಹರ್ಷ, ಕವಿತಾ ಮೋಹನ್ ಮತ್ತಿತರರು ಇದ್ದರು.

ನೊಂದಾಯಿಸಲು ಇಚ್ಚಿಸುವ ದಾನಿಗಳು ಲಯನ್ಸ್ ಕುಶಾಲನಗರ ಅಧ್ಯಕ್ಷರಾದ ಕೆ.ಆರ್. ಹರ್ಷ-9901788770, ಅಥವಾ ಕಾರ್ಯದರ್ಶಿ ಪಿ.ಎಂ. ಮೋಹನ್-9448274678 ಸಂಪರ್ಕಿಸಬಹುದು ಎಂದು ಲಯನ್ಸ್ ಪ್ರಕಟಣೆ ತಿಳಿಸಿದೆ.

ಮೂರ್ನಾಡು: ಕೊಡಗು ಲಯನ್ಸ್ ಕ್ಲಬ್ ವತಿಯಿಂದ ಮೂರ್ನಾಡು ಸರಕಾರಿ ಆಸ್ಪತ್ರೆಯಲ್ಲಿ ಅಂಗಾಂಗ ದಾನದ ಶಿಬಿರವು ಜರುಗಿತು. ದಾನಿಗಳಿಗೆ ಅಂಗಾಂಗ ದಾನ ನೀಡುವದರ ಗುರುತಿನ ಚೀಟಿಯನ್ನು ವಿತರಿಸಲಾಯಿತು. ಕಿಗ್ಗಾಲು ಎಸ್. ಗಿರೀಶ್ ಮತ್ತು ಶಶಿಕಲಾ ಗಿರೀಶ್ ಸೇರಿದಂತೆ ಅನೇಕರು ಅಂಗಾಂಗ ದಾನ ಮಾಡುವದಕ್ಕೆ ಒಪ್ಪಿಗೆ ಸೂಚಿಸಿ, ನಿಗದಿತ ಅರ್ಜಿಗೆ ರುಜು ಮಾಡಿ, ಗುರುತಿನ ಕಾರ್ಡ್ ಪಡೆದರು.

ಸಿದ್ದಾಪುರ: 17 ಜಿಲ್ಲಾ ಲಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿರುವ ಅಂಗಾಂಗಗಳ ದಾನದ ನೊಂದಣಿ ಕಾರ್ಯ ಸಿದ್ದಾಪುರದಲ್ಲಿ ನಡೆಯಿತು. ಸಿದ್ದಾಪುರದ ಲಯನ್ಸ್ ಕ್ಲಬ್ ವತಿಯಿಂದ ಅಂಗಾಂಗಗಳು ದಾನ ಮಾಡುವ ವ್ಯಕ್ತಿಗಳ ನೊಂದಾವಣಿ ಕಾರ್ಯವು ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದು; 55ಕ್ಕೂ ಅಧಿಕ ಮಂದಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ. ಸಿದ್ದಾಪುರ ಲಯನ್ಸ್ ಕ್ಲಬ್‍ನ ಅಧ್ಯಕ್ಷ ವಿವೇಕ್ ಜೋಯಪ್ಪ ಪದಾಧಿಕಾರಿ ಗಳಾದ ಬಿಪಿನ್ ಭರತ್ ಸುನಿಲ್ ನರೇಂದ್ರ ತೋಮಸ್ ವರುಣ್ ಚಿನ್ನು ಶ್ವೇತ ಹಾಗೂ ಆಟೋ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಎಂ.ಆರ್. ಸಲೀಂ ಹಾಗೂ ವೈದ್ಯಾಧಿಕಾರಿ ಡಾಕ್ಟರ್ ರಾಘವೇಂದ್ರ ಹಾಗೂ ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.

ಸೋಮವಾರಪೇಟೆ: ಲಯನ್ಸ್ ಕ್ಲಬ್ ವತಿಯಿಂದ ಅಂಗಾಂಗ ದಾನ ನೋಂದಣಿ ಕಾರ್ಯಕ್ರಮ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಲಯನ್ಸ್ ಅಧ್ಯಕ್ಷ ಎಂ.ಎ. ಹರೀಶ್ ಉದ್ಘಾಟಿಸಿದರು. 56 ಮಂದಿ ಸಾರ್ವಜನಿಕರು ಅಂಗಾಂಗಗಳ ದಾನಕ್ಕೆ ಹೆಸರು ನೋಂದಾಯಿಸಿದರು. ಇದೇ ಸಂದರ್ಭ ಸಾರ್ವಜನಿಕರಿಗೆ ಅಂಗಾಂಗ ದಾನದ ಉಪಯೋಗದ ಬಗ್ಗೆ ಮಾಹಿತಿ ನೀಡಲಾಯಿತು. ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಪ್ರತಿ ದಿನ ನೋಂದಣಿ ಕಾರ್ಯ ನಡೆಯುತ್ತದೆ ಎಂದು ಅಧ್ಯಕ್ಷರು ತಿಳಿಸಿದರು.

ಈ ಸಂದರ್ಭ ಕಾರ್ಯದರ್ಶಿ ಕೆ.ಎನ್. ತೇಜಸ್ವಿ, ಖಜಾಂಚಿ ರಾಮಚಂದ್ರ, ಮಾಜಿ ಅಧ್ಯಕ್ಷರುಗಳಾದ ಎ.ಎಸ್. ಮಹೇಶ್, ಯೋಗೇಶ್, ಪದಾಧಿಕಾರಿಗಳಾದ ಬಸಪ್ಪ, ಸಿ.ಕೆ. ಮಲ್ಲಪ್ಪ, ಅನಿತಾ, ಆಶಾ ಯೋಗೇಂದ್ರ, ಲೋಹಿತ್ ಇದ್ದರು.