ಸೋಮವಾರಪೇಟೆ,ನ.18: ಕೂತಿ ಗ್ರಾಮದ ಸೋಮೇಶ್ವರ ದೇವಾಲಯದಲ್ಲಿ ಕಾರ್ತಿಕ ಪೂಜೆ ನಡೆಯಿತು. 500 ವರ್ಷ ಇತಿಹಾಸವಿರುವ ದೇವಾಲಯದಲ್ಲಿ ಬಾಳೆಯಿಂದ ಮಾಡಿದ ಕತ್ರಿಕೆ ಹಾಗೂ ಚೆಂಡುಹೂವಿನಿಂದ ತಯಾರಿಸಿದ ಕಾರ್ತಿಯನ್ನಿಟ್ಟು ದೇವರಿಗೆ ಪೂಜೆ ಸಲ್ಲಿಸಲಾಯಿತು.
ಈ ಸಂಧರ್ಭ ಗ್ರಾಮಾಧ್ಯಕ್ಷ ಪರಮೇಶ್, ಸದಸ್ಯರಾದ ಶಿವರಾಜ್, ದಿವಾಕರ್, ಉಮೇಶ್, ರೇವಣ್ಣ, ಪ್ರದೀಪ್‍ಕುಮಾರ್ ದೇವಾಲಯದ ಅರ್ಚಕ ಅನಂತ್ ರಾಮ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.