ಸುಂಟಿಕೊಪ್ಪ, ನ. 18: ಕೊಡಗು ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಕೋರ್ ಕಮಿಟಿ ಸಭೆಯು ಸಂಘದ ಅಧ್ಯಕ್ಷ ಶ್ಯಾಮ್ ಪ್ರಸಾದ್ ಅಧ್ಯಕ್ಷತೆಯಲ್ಲಿ ನಿಸರ್ಗಧಾಮದಲ್ಲಿ ನಡೆಯಿತು. ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡುವ, ವೇತನ, ಸೇವಾ ಭದ್ರತೆ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಶಾಸಕ ಅಪ್ಪಚ್ಚು ರಂಜನ್ ಅವರೊಂದಿಗೆ ಉನ್ನತ ಶಿಕ್ಷಣ ಸಚಿವರ ಬಳಿಗೆ ಕೊಡಗು ಅತಿಥಿ ಉಪನ್ಯಾಸಕರ 10 ಮಂದಿಯ ನಿಯೋಗ ತೆರಳುವದು, ಪ್ರತಿಯೊಬ್ಬ ಅತಿಥಿ ಉಪನ್ಯಾಸಕರು ಕಡ್ಡಾಯವಾಗಿ ಟ್ವಿಟರ್ ಖಾತೆಯನ್ನು ಹೊಂದುವದು ಮತ್ತು ಆ ಮೂಲಕ ಸರ್ಕಾರ ಗಮನ ಸೆಳೆಯುವದು, ಎಂಬಿತ್ಯಾದಿ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಗೌರವಾಧ್ಯಕ್ಷ ವನಿತ್ ಕುಮಾರ್, ಕಾರ್ಯದರ್ಶಿ ಪಿ.ಬಿ.ಸುರೇಶ್, ರಾಜ್ಯ ಸಂಘದ ಉಪಾಧ್ಯಕ್ಷ ಸತೀಶ್, ಉಪನ್ಯಾಸಕರಾದ ನಟರಾಜು, ತ್ಯಾಗರಾಜು, ಗಾಯತ್ರಿ, ಶಾಲಿನಿ, ಸರಿತಾ, ಪಾಪಣ್ಣ ಇತರರು ಇದ್ದರು.