ಕೂಡಿಗೆ, ನ. 17: ಕೂಡಿಗೆ- ಕೋವರ್‍ಕೊಲ್ಲಿ ರಸ್ತೆಯನ್ನು ಕಳೆದ ಮೂರು ವರ್ಷಗಳಿಂದ ಅಗಲೀಕರಣ ಮತ್ತು ರಾಜ್ಯ ಹೆದ್ದಾರಿ ನಿಯಮದಡಿ ಡಾಂಬರೀಕರಣ ಕಾಮಗಾರಿ ನಡೆಸಲಾಗಿತ್ತು. ಆದರೆ, ಅತಿಯಾದ ಮಳೆ ಹಾಗೂ ವಾಹನ ಸಂಚಾರದಿಂದ ಕೆಲವು ಭಾಗಗಳಲ್ಲಿ ರಸ್ತೆ ಹಾನಿಯಾಗಿ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಇದನ್ನರಿತ ಲೋಕೋಪಯೋಗಿ ಇಲಾಖೆ ಸಾರ್ವಜನಿಕರ ದೂರಿನನ್ವಯ ಇಂದು ಹಾನಿಯಾಗಿದ್ದ ಕೂಡಿಗೆ- ಮದಲಾಪುರ ರಸ್ತೆ, ಹುದುಗೂರು ಸಮೀಪದಲ್ಲಿ ಹಾಗೂ ಇನ್ನೂ ಕೆಲವು ಕಡೆಗಳಲ್ಲಿ ದುರಸ್ತಿ ಕಾಮಗಾರಿ ಕೈಗೊಂಡಿದೆ.