ಗೋಣಿಕೊಪ್ಪ ವರದಿ, ನ. 17 : ಮೂಲತಃ ರಾಜಸ್ಥಾನವರಾದ ಗೋಣಿಕೊಪ್ಪದಲ್ಲಿ ವಾಸವಿದ್ದ ಎಸ್. ಕೆ. ಗೇವಾರಾಮ್ (36) ನವೆಂಬರ್ 16 ರಿಂದ ಕಾಣೆಯಾಗಿದ್ದಾರೆ. ತಾಯಿಯ ಮನೆ ರಾಜಸ್ಥಾನಕ್ಕೆ ತೆರಳುವದಾಗಿ ಹೋಗಿರುವ ಅವರು ಅಲ್ಲಿಗೆ ತಲುಪಿಲ್ಲ. ಮೊಬೈಲ್ ಕೂಡ ಸಿಗುತ್ತಿಲ್ಲ ಎಂದು ಅವರ ಸಹೋದರ ಕರ್ನರಾಂ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕನ್ನಡ, ಹಿಂದಿ, ಮಾರ್ವಾಡಿ ಭಾಷೆ ತಿಳಿದಿರುವ ಇವರ ಪತ್ತೆಯಾದರೆ 08274 247333 ಸಂಖ್ಯೆಗೆ ತಿಳಿಸಲು ಗೋಣಿಕೊಪ್ಪ ಪೊಲೀಸ್ ಠಾಣೆ ಪ್ರಕಟಣೆ ಕೋರಿದೆ.