ಸುಂಟಿಕೊಪ್ಪ, ನ. 17: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮಾದಾಪುರ, ಐಗೂರು, ಗರ್ವಾಲೆ, ಹಾಗೂ ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗಡಿನಾಡು ಬಿಳಿಗೇರಿ ವಿವಿದ್ಧೋದ್ದೇಶ ಸಹಕಾರ ಧವಸ ಭಂಡಾರ ಹಾಗೂ ಕಾಂಡನಕೊಲ್ಲಿ ವಿವಿದ್ಧೋದ್ದೇಶ ಸಹಕಾರ ಧವಸ ಭಂಡಾರ ಇವುಗಳ ಸಂಯುಕ್ತ ಆಶ್ರಯದಲ್ಲಿ 66ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ “ಯುವಜನ ಮಹಿಳಾ ಮತ್ತು ಅಬಲವರ್ಗಕ್ಕಾಗಿ ಸಹಕಾರ ಸಂಸ್ಥೆಗಳು” ದಿನಾಚರಣೆಯನ್ನು ತಾ. 19 ರಂದು ಬೆಳಿಗ್ಗೆ 10.30 ಗಂಟೆಗೆ ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಉದ್ಘಾಟನೆಯನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನೇರವೇರಿಸಲಿದ್ದು, ಹಿರಿಯ ಸಹಕಾರಿಗಳಿಗೆ ಸನ್ಮಾನವನ್ನು ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕ ಎ.ಕೆ. ಮನು ಮುತ್ತಪ್ಪ ನೆರವೇರಿಸುವರು. ಅಧ್ಯಕ್ಷತೆಯನ್ನು ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎ.ಮೊಣ್ಣಪ್ಪ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಡಿ. ಮಂಜುನಾಥ್, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಪಿ.ಸಿ. ಅಚ್ಚಯ್ಯ ಇತರರು ಆಗಮಿಸಲಿದ್ದಾರೆ. ದಿನದ ಮಹತ್ವ ಕುರಿತು ಕೆಐಸಿಎಂ ಪ್ರಾಂಶುಪಾಲೆ ಡಾ.ಆರ್.ಎಸ್. ರೇಣುಕ ಉಪನ್ಯಾಸ ನೀಡಲಿದ್ದಾರೆ.

ಹಿರಿಯ ಸಹಕಾರಿ ಗಳಾದ ಮಾದಾಪುರದ ಪಾಸುರ ಉತ್ತಪ್ಪ, ಚಾಚಿನಾಡಂಡ ಸೋಮಯ್ಯ, ಸುಂಟಿಕೊಪ್ಪ ಎಸ್.ಪಿ. ನಿಂಗಪ್ಪ, ಗರ್ವಾಲೆಯ ನಾಪಂಡ ಚಿಣ್ಣಪ್ಪ ಅವರುಗಳನ್ನು ಸನ್ಮಾನಿಸಲಾಗುವದು.