ಮಡಿಕೇರಿ, ನ.17 : ದೇಶದಲ್ಲಿ ಸ್ವಾಭಿಮಾನದ ರಾಷ್ಟ್ರೀಯತೆ ಬದಲಿಗೆ ಸರ್ವಾಧಿಕಾರದ ರಾಷ್ಟ್ರೀಯತೆ ರಾರಾಜಿಸುತ್ತಿದೆ ಎಂದು ಹಿರಿಯ ವಕೀಲರು ಹಾಗೂ ವಿಚಾರವಾದಿ ಕೆ.ಪಿ.ಬಾಲಸುಬ್ರಹ್ಮಣ್ಯ ವಿಷಾದಿಸಿದರು.
ಸಮನ್ವಯ ವೇದಿಕೆ ವತಿಯಿಂದ ನಗರದ ಬಾಲಭವನದಲ್ಲಿ ನಡೆದ ‘ರಾಷ್ಟ್ರ ಮತ್ತು ರಾಷ್ಟ್ರೀಯತೆ’ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭೌಗೋಳಿಕ ನೆಲೆಗಟ್ಟಿನ ರಾಷ್ಟ್ರೀಯತೆಗಿಂತ ಸ್ವಾಭಿಮಾನದ ರಾಷ್ಟ್ರೀಯತೆ ದೊಡ್ಡದು. ದೇಶವನ್ನಿಂದು ರಾಜಕೀಯ ಬಲದ ರಾಷ್ಟ್ರೀಯತೆ ಆಕ್ರಮಿಸಿಕೊಂಡು ಜನಸಾಮಾನ್ಯರ ಧ್ವನಿ ಅಡಗಿಸುತ್ತಿದೆ ಎಂದು ಕೆ.ಪಿ.ಬಾಲಸುಬ್ರಹ್ಮಣ್ಯ ಹೇಳಿದರು.
ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಡಾ.ಕೆ.ಪ್ರಕಾಶ್ ಆಡಳಿತ ವ್ಯವಸ್ಥೆಯ ವೈಫಲ್ಯಗಳನ್ನು ಮುಚ್ಚಿಡುವ ಸಲುವಾಗಿ ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕøತಿ ಎನ್ನುವ ಧೋರಣೆಗಳನ್ನು ಆಡಳಿತಾರೂಢರು ವಿಭಿನ್ನ ರೀತಿಯಲ್ಲಿ ಮಂಡಿಸುವ ಮೂಲಕ ಜನರ ಹಾದಿ ತಪ್ಪಿಸುವ ಕಾರ್ಯ ನಡೆಸುತ್ತಿದ್ದಾರೆ. ಆ ಮೂಲಕ ಜನರ ಮೂಲ ಪ್ರಶ್ನೆಗಳನ್ನು ಬಗೆಹರಿಸುವ ಪ್ರಯತ್ನವನ್ನು ದೂರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸಮನ್ವಯ ವೇದಿಕೆಯ ಪ್ರಮುಖರಾದ ಲತೀಫ್ ಮಾಸ್ಟರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.