ಗೋಣಿಕೊಪ್ಪ ವರದಿ, ನ. 17: ಬೆಂಗಳೂರಿನಲ್ಲಿ ವಾಸವಿರುವ ಕೊಡಗಿನ ಬೆಸಗೂರು ಗ್ರಾಮ ವ್ಯಾಪ್ತಿಯ ನಿವಾಸಿಗಳ ಸಂತೋಷಕೂಟ ಅಲ್ಲಿನ ಕೊಡವ ಸಮಾಜದಲ್ಲಿ ನಡೆಯಿತು.
ಬೆಸಗೂರು ನಿವಾಸಿ ಕೂಟದ ಅಧ್ಯಕ್ಷ ಅರಮಣಮಾಡ ನರೇಂದ್ರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಂತೋಷಕೂಟದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಿತು. ಅರಮಾಣಮಾಡ, ಬಲ್ಲಿಮಾಡ, ಬಾಚಮಾಡ, ಚೆಟ್ಟಿಮಾಡ, ಚೊಟ್ಟೆಕಾಳಪಂಡ, ಕೊಕ್ಕಲೆಮಾಡ, ಮೇಚಮಾಡ, ಪಾರುವಂಗಡ, ಪೆÇನ್ನಿಮಾಡ, ಪುಳ್ಳಂಗಡ, ಸುಳ್ಳಿಮಾಡ ಕುಟುಂಬದ ಸದಸ್ಯರುಗಳು ಮತ್ತು ತವರು ಮನೆಯ ಮಹಿಳೆಯರು ಪಾಲ್ಗೊಂಡಿದ್ದರು.