ಮಡಿಕೇರಿ, ನ. 17: ಕರ್ನಾಟಕ ಸಾಹಿತ್ಯ ಅಕಾಡೆಮಿಯು 2019ರ ಡಿಸೆಂಬರ್ ಅಥವಾ 2020ರ ಜನವರಿಯಲ್ಲಿ ರಾಜ್ಯಮಟ್ಟದ ಐದು ದಿನಗಳ ಹಳಗನ್ನಡ-ರಸಗ್ರಹಣ ಶಿಬಿರ ಏರ್ಪಡಿಸಲು ಉದ್ದೇಶಿಸಿದ್ದು, ಆಸಕ್ತಿಯಿರುವ 20 ರಿಂದ 40 ವರ್ಷ ವಯಸ್ಸಿನ ರಾಜ್ಯದ ಎಲ್ಲಾ ಭಾಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ತಾ. 25 ಕೊನೆಯ ದಿನವಾಗಿದೆ. ಆಸಕ್ತರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್‍ಸೈಟ್ hಣಣಠಿ://ಞಚಿಡಿಟಿಚಿಣಚಿಞಚಿ sಚಿhiಣhಥಿಚಿ ಚಿಛಿಚಿಜemಥಿ.oಡಿg ನಿಂದ ಅರ್ಜಿ ನಮೂನೆ ಹಾಗೂ ವಿವರಗಳನ್ನು ಪಡೆ ದುಕೊಳ್ಳಬಹುದು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಎನ್. ಕರಿಯಪ್ಪ ತಿಳಿಸಿದ್ದಾರೆ.