*ಗೋಣಿಕೊಪ್ಪಲು, ನ. 17: ಆಂಧ್ರಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ ಜೂನಿಯರ್ ಕ್ರೀಡಾಕೂಟದ ಸ್ಪ್ರಿಂಟ್ ಮೆಡ್ಲೆ ವಿಭಾಗದಲ್ಲಿ 1000 ಮೀಟರ್ ಓಟವನ್ನು 2 ನಿಮಿಷ 11 ಸೆಕೆಂಡ್‍ಗಳಲ್ಲಿ ಕ್ರಮಿಸಿ ರಾಷ್ಟ್ರೀಯ ದಾಖಲೆಗೈದ ಕಾವೇರಿ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಜ್ಯೋತಿಕಾಳನ್ನು ಮಕ್ಕಳ ದಿನಾಚರಣೆ ಅಂಗವಾಗಿ ಕಾವೇರಿ ವಿದ್ಯಾಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

ವಿದ್ಯಾರ್ಥಿ ಕ್ಷೇಮಪಾಲನ ಸಂಚಾಲಕಿ ಡಾ. ಕೆ. ರೇಖಾ ಚಿಣ್ಣಪ್ಪ ಪ್ರಾಂಶುಪಾಲ ಎಸ್.ಎಸ್. ಮಾದಯ್ಯ, ಉಪನ್ಯಾಸಕರು ಹಾಗೂ ಆಡಳಿತ ಸಿಬ್ಬಂದಿಗಳು ಇದ್ದರು.