ಸುಂಟಿಕೊಪ್ಪ, ನ.17: ಸುಂಟಿಕೊಪ್ಪ ಗ್ರಾ. ಪಂ.ಯ 2018-19ನೇ ಸಾಲಿನ ಜಮಾಬಂದಿ ಕಾರ್ಯಕ್ರಮ ತಾ.21 ರಂದು ಬೆಳಿಗ್ಗೆ 10.30 ಗಂಟೆಗೆ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗ್ರಾ.ಪಂ. ಅಧ್ಯಕ್ಷೆ ರೋಸ್ ರಾಡ್ರಿಗಸ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.ನೋಡಲ್ ಅಧಿಕಾರಿಯಾಗಿ ಕೃಷಿ ಇಲಾಖೆ ಅಧಿಕಾರಿ ಬಿ.ಹೆಚ್. ಮನಸ್ವಿ ಆಗಮಿಸಲಿದ್ದು, ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ತಾ.ಪಂ. ಸದಸ್ಯ ಓಡಿಯಪ್ಪನ ವಿಮಲಾವತಿ ಭಾಗವಹಿಸಲಿದ್ದಾರೆ.