ವೀರಾಜಪೇಟೆ, ನ. 16: ಕೊಡವ ಸೌಹಾರ್ದ ಸಹಕಾರಿ ಸಂಘ ಬಹಳ ಹಿಂದೆಯೇ ಸ್ಥಾಪನೆಯಾಗಬೇಕಿತ್ತು. ಸಂಸ್ಥೆಯ ಆರಂಭ ವಿಳಂಬವಾದರೂ; ಗ್ರಾಹಕರಿಗೆ ಎಲ್ಲ್ಲಾ ರೀತಿಯಿಂದಲೂ ಉತ್ತಮ ಸೇವೆ ಲಭಿಸುವಂತಾಗಲಿ ಎಂದು ಹಿರಿಯ ವೈದ್ಯ ಮಾದಂಡ ಎಸ್. ಉತ್ತಯ್ಯ ಹೇಳಿದರು.
ವೀರಾಜಪೇಟೆಯ ದೊಡ್ಡಟ್ಟಿ ಚೌಕಿ ಬಳಿ ಇರುವ ಪ್ರಕಾಶ್ ಟವರ್‍ನಲ್ಲಿ ನೂತನವಾಗಿ ಪ್ರಾರಂಭಗೊಂಡ ಕೊಡವ ಸೌಹಾರ್ದ ಕ್ರೆಡಿಟ್ ಕೋ- ಆಪ್‍ರೇಟಿವ್ ಲಿಮಿಟೆಡ್ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಹಲವಾರು ಕಡೆಗಳಲ್ಲಿ ಸಹಕಾರಿ ಸಂಘಗಳು ಕಾರ್ಯ ನಿರ್ವಹಿಸುತ್ತಿದೆ. ಆದರೆ ಕೊಡವರೇ ಸೌಹಾರ್ದ ಸಹಕಾರಿ ಬ್ಯಾಂಕ್‍ನಂತಹ ಹಣಕಾಸು ಸಂಸ್ಥೆಗೆ ಚಾಲನೆ ನೀಡಿರುವದು ಶ್ಲಾಘನೀಯ ಎಂದರು.
ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ನೆಲ್ಲಮಕ್ಕಡ ಉಮೇಶ್ ಮುತ್ತಣ್ಣ ಮಾತನಾಡಿ, ಕೊಡವ ಸೌಹಾರ್ದ ಸಹಕಾರಿ ಸಂಘದಲ್ಲಿ ಹದಿಮೂರು ನಿರ್ದೇಶಕರುಗಳ ಮೂಲಕ ಪ್ರಾರಂಭ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದ ವ್ಯವಹಾರದಲ್ಲಿ ಸೇವಾ ಮನೋಭಾವನೆ ಕಡಿಮೆಯಾಗಿದೆ. ಹೀಗಾಗಿ ನೂತನ ಸಂಸ್ಥೆ ಆರಂಭಿಸಿದ್ದು, ಎಲ್ಲ ರೀತಿಯ ಸಾಲ ಸೌಲಭ್ಯಗಳಿಗೆ ಅವಕಾಶವಿದೆ. ಎಂದು ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷ ಚೇಂದಂಡ ವಸಂತ್ ಕುಮಾರ್, ಎಲ್ಲ ಆಡಳಿತ ಮಂಡಳಿಯ ಸದಸ್ಯರುಗಳು ಹಾಜರಿದ್ದರು.