ಮಡಿಕೇರಿ, ನ. 16: ಕುಶಾಲನಗರ 220/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೋಗುವ 11 ಕೆವಿ ಫೀಡರ್‍ಗಳಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯ ಕೈಗೊಳ್ಳಬೇಕಿರುವದರಿಂದ ತಾ. 17 ರಂದು ಮಾದಾಪುರ, ಹಟ್ಟಿಹೊಳೆ, ಕಾಂಡನಕೊಲ್ಲಿ, ಗರ್ವಾಲೆ, ಬಿಳಿಗೇರಿ, ಹೆಬ್ಬಾಲೆ, ಶಿರಂಗಾಲ ಹಾಗೂಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತು ತಾ. 18 ರಂದು ಕುಶಾಲನಗರ ಪಟ್ಟಣ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ.
66/11 ಕೆವಿ ಸುಂಟಿಕೊಪ್ಪ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೋಗುವ 11 ಕೆವಿ ಫೀಡರ್‍ಗಳಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯ ಕೈಗೊಳ್ಳಬೇಕಿರುವದರಿಂದ ತಾ. 18 ರಂದು ಕಂಬಿಬಾಣೆ, ಕೊಡಗರಹಳ್ಳಿ, ಉಪ್ಪುತೋಡು, ಮಾದಾಪುರ, ಹಟ್ಟಿಹೊಳೆ, ಕಾಂಡನಕೊಲ್ಲಿ, ಗರ್ವಾಲೆ, ಬಿಳಿಗೇರಿ ಹಾಗೂಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತು ತಾ. 20 ರಂದು ಚೆಟ್ಟಳ್ಳಿ, ಶಿರಂಗಾಲ, ವಾಲ್ನೂರು-ತ್ಯಾಗತ್ತೂರು, ಸುತ್ತಮುತ್ತಲಿನ ಹಾಗೂ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯ ವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವದು. ಸಾರ್ವಜನಿಕರು ಸಹಕರಿಸುವಂತೆ ಎಂದು ಮಡಿಕೇರಿ ಸೆಸ್ಕ್, ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ಸೋಮಶೇಖರ್ ಕೋರಿದ್ದಾರೆ.