ಮಡಿಕೇರಿ, ನ. 16: ಮ್ಯಾಚ್‍ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಸಿ.ಎಂ. ಗೌತಮ್ ಅವರನ್ನು ಇತ್ತೀಚೆಗೆ ಬಂಧಿಸಿರುವ ಸಿಸಿಬಿ ಪೊಲೀಸರು ಇನ್ನೂ ಹಲವು ಕ್ರಿಕೆಟಿಗರನ್ನು ವಿಚಾರಣೆಗೆ ಕರೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದರಂತೆ ಐ.ಪಿ.ಎಲ್. ಆಟಗಾರ ಕೋಲ್ಕತ್ತಾ ನೈಟ್ ರೈಡರ್ ತಂಡದ ಕೊಡಗು ಮೂಲದವರಾದ ಕೆ.ಸಿ. ಕಾರ್ಯಪ್ಪ ಅವರನ್ನೂ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಐಪಿಎಲ್ ಆಡಿರುವ ರಾಜ್ಯದ ಇನ್ನಿತರ ಕೆಲವು ಮಂದಿಯಿಂದಲೂ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆನ್ನಲಾಗಿದೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಕೆ.ಸಿ. ಕಾರ್ಯಪ್ಪ ಸಿಸಿಬಿ ಪೊಲೀಸರು ತಮ್ಮನ್ನು ಕರೆಸಿ ವಿಚಾರಣೆ ನಡೆಸಿದ್ದು, ಇತರ ಕೆಲವು ಆಟಗಾರರಿಂದಲೂ ಮಾಹಿತಿ ಪಡೆಯುತ್ತಿದ್ದಾರೆ. ಹೊರತು ಇದರಲ್ಲಿ ತಮ್ಮ ಪಾತ್ರ ಏನೂ ಇಲ್ಲ ಆದರೆ ಮಾಧ್ಯಮಗಳಲ್ಲಿ ಇದು ದೊಡ್ಡ ಸುದ್ದಿಯಾಗಿದೆ ಎಂದರು.