ಕೂಡಿಗೆ, ನ. 16: ಕೂಡಿಗೆ ಶ್ರೀ ಉದ್ಬವ ಸುಬ್ರಹ್ಮಣ್ಯ ಸ್ವಾಮಿ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ 2ನೇ ವರ್ಷದ ಅದ್ಧೂರಿ ಕನ್ನಡ ರಾಜ್ಯೋತ್ಸವವು ತಾ. 20 ರಂದು ನಡೆಯಲಿದೆ.

ರಾಜ್ಯೋತ್ಸವದ ಅಂಗವಾಗಿ ಆಟೋ ಚಾಲಕರು, ಮಾಲೀಕರು ಹಾಗೂ ಸಾರ್ವಜನಿಕರಿಗೆ ರಕ್ತದಾನ ಶಿಬಿರ ಏರ್ಪಡಿಸಲಾಗಿದ್ದು, ಕೂಡಿಗೆಯಲ್ಲಿರುವ ಶಕ್ತಿ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಬಟ್ಟೆ ವಿತರಣೆ ಮತ್ತು ಅನ್ನದಾನ, ಸಾರ್ವಜನಿಕರಿಗೆ ಅನ್ನ ಸಂತರ್ಪಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಕೆ.ಕೆ. ರವಿ ಹಾಗೂ ಕಾರ್ಯದರ್ಶಿ ಶಂಕರ್ ತಿಳಿಸಿದ್ದಾರೆ.