ಕೂಡಿಗೆ, ನ. 16 : ಕಳೆದ ಮೂರು ದಿನಗಳ ಹಿಂದೆ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಎದುರಿನಲ್ಲಿರುವ ತೂಗುಸೇತುವೆಯ ಮೇಲಿಂದ ಪಿರಿಯಾಪಟ್ಟಣ ತಾಲೂಕಿನ ಅಂಬ್ಲಾರೆ ಗ್ರಾಮದ ನಿವಾಸಿ ರಾಮೇಗೌಡ ಎಂಬವರು ಅನಾರೋಗ್ಯದಿಂದ ಬೇಸತ್ತು ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿದ್ದರು. ಮೂರು ದಿನಗಳಿಂದ ಅಗ್ನಿಶಾಮಕ (ಮೊದಲ ಪುಟದಿಂದ) ದಳದ ಸಿಬ್ಬಂದಿಗಳು ಹಗಲು-ಇರುಳು ಕಾರ್ಯಾಚರಣೆ ನಡೆಸಿದರೂ ಶವ ಪತ್ತೆಯಾಗಿರಲಿಲ್ಲ. ಶನಿವಾರ ಬೆಳಗ್ಗೆ ಹೆಬ್ಬಾಲೆಯಲ್ಲಿ ಮೈಸೂರು ಜಿಲ್ಲೆಯ ಸಂಪರ್ಕ ಸೇತುವೆಯ ಸಮೀಪದಲ್ಲಿ ನದಿಯ ದಡದಲ್ಲಿ ಶವ ತೇಲುತ್ತಿದ್ದದ್ದು ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿ, ನಂತರ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ.