ಸೋಮವಾರಪೇಟೆ, ನ. 16: ಇನ್ನರ್‍ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಕುವೆಂಪು ಪೂರ್ವ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಸ್ಪರ್ಧೆಗಳು ನಡೆದವು.

ಸ್ಪರ್ಧಾ ವಿಜೇತರಾದ ಎಲ್‍ಕೆಜಿಯ ಪುಣ್ಯಶ್ರೀ, ಕೃಷಿಕ, ಯುಕೆಜಿಯ ಶಿಜಲ್ ಹಾಗೂ ನಿದ್ಧಾ ಫಾತಿಮ ಅವರುಗಳಿಗೆ ಕ್ಲಬ್ ಅಧ್ಯಕ್ಷರಾದ ಕವಿತ ವಿರೂಪಾಕ್ಷ ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಆಶಾ ಯೋಗೇಂದ್ರ, ಕಾರ್ಯದರ್ಶಿ ಸರಿತ ರಾಜೀವ್, ಸಹ ಕಾರ್ಯದರ್ಶಿ ಅನಿತಾ ಕಿರಣ್, ಖಜಾಂಚಿ ನಂದಿನಿ ಗೋಪಾಲ್, ಪದಾಧಿಕಾರಿಗಳಾದ ಸೌಮ್ಯ ಸತೀಶ್, ಕಾವೇರಿ ಸುರೇಶ್, ಪ್ರೇಮ ಹೃಷಿಕೇಶ್, ಲತಾ ನಾಗೇಶ್, ತನ್ಮಯಿ ಪ್ರವೀಣ್ ಮತ್ತಿತರರು ಇದ್ದರು.