ಮಡಿಕೇರಿ, ನ. 15: ನೆಹರು ಯುವ ಕೇಂದ್ರ, ಸಂಪಾಜೆ ಚೆಡಾವು ನೇತಾಜಿ ಗೆಳೆಯರ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ತಾ. 24 ರಂದು ಸಂಪಾಜೆ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಡಿಕೇರಿ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ ನಡೆಯಲಿದೆ.

ಪುರುಷರಿಗೆ ಹಗ್ಗ ಜಗ್ಗಾಟ, ಬಾರದ ಗುಂಡು ಎಸೆತ, ಗುಡ್ಡಗಾಡು ಓಟ, 100 ಮೀ. ಓಟ, ಮಹಿಳೆಯರಿಗೆ ಥ್ರೋಬಾಲ್, ಬಾರದ ಗುಂಡು ಎಸೆತ, ಮಡಿಕೆ ಒಡೆಯುವದು, 100 ಮೀ. ಓಟ ಏರ್ಪಡಿಸಲಾಗಿದೆ. ಸ್ಪರ್ಧಿಗಳು ಮಡಿಕೇರಿ ತಾಲೂಕಿನವರಾಗಿರಬೇಕು. ಹಗ್ಗಜಗ್ಗಾಟದ ಒಂದು ತಂಡದ ತೂಕ 450 ಕೆ.ಜಿ. ಮೀರಬಾರದು. ಗುಡ್ಡಗಾಡು ಓಟಕ್ಕೆ ತಾ. 24 ರಂದು ಬೆಳಿಗ್ಗೆ 7.30 ಗಂಟೆಗೆ ಚೆಡಾವಿನಲ್ಲಿ ಹಾಜರಿರಬೇಕು. ನಿರ್ಣಯಕರ ಹಾಗೂ ಸಂಘಟಕರ ತೀರ್ಮಾನವೇ ಅಂತಿಮ. ಸ್ಪರ್ಧೆಗಳಿಗೆ ತಾ. 23 ರ ಸಂಜೆ 5 ಗಂಟೆಯೊಳಗೆ ನೋಂದಾಯಿಸತಕ್ಕದ್ದು. ಹೆಚ್ಚಿನ ಮಾಹಿತಿಗೆ 08272-225470, 8762306475, 9480252588, 8277179182 ನ್ನು ಸಂಪರ್ಕಿಸಬಹುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ತಿಳಿಸಿದ್ದಾರೆ.