ಮಡಿಕೇರಿ, ನ. 15: ಬೆಂಗಳೂರು ದಕ್ಷಿಣ ಲಯನ್ಸ್ ಸಂಸ್ಥೆಯ ಸಂಚಾರಿ ನೇತ್ರಾಲಯ ಮುಖಾಂತರ 1987ರಲ್ಲಿ ಮೊದಲ ಬಾರಿಗೆ; ಮಡಿಕೇರಿ ಅಶ್ವಿನಿ ಆಸ್ಪತ್ರೆಯಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಆರಂಭಿಸಿದ್ದು; ಪ್ರಸಕ್ತ 31ನೇ ವರ್ಷದ ಈ ಕಾರ್ಯಕ್ರಮಕ್ಕೆ ಚಾಲನೆ ಲಭಿಸಿದೆ. ಕಳೆದ ಮೂರು ದಶಕಗಳಲ್ಲಿ ಇಲ್ಲಿನ ಆರು ಸಾವಿರಕ್ಕೂ ಅಧಿಕ ಮಂದಿಗೆ ಶಸ್ತ್ರ ಚಿಕಿತ್ಸೆ ಮೂಲಕ ನೇತ್ರದಾನ ನೀಡಿರುವ ತೃಪ್ತಿಯಿದೆ ಎಂದು ಡಾ. ಶಿವಪ್ರಸಾದ್ ಹರ್ಷ ವ್ಯಕ್ತಪಡಿಸಿದ್ದಾರೆ.ಅಶ್ವಿನಿ ಆಸ್ಪತ್ರೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತಿರುವ ಉಚಿತ ನೇತ್ರ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ; ಮಾಧ್ಯಮಗಳೊಂದಿಗೆ ಅನಿಸಿಕೆ ಹಂಚಿಕೊಂಡ ಅವರು; ಹಿಂದೆ ತೀರಾ ಕ್ಲಿಷ್ಟಕರ ರೀತಿಯ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದು; ಈಗ ಆಧುನಿಕ ತಂತ್ರಜ್ಞಾನದೊಂದಿಗೆ ಸುಲಭವಾಗಿ ಈ ಕಾರ್ಯ ನಡೆಯುವಂತಾಗಿದೆ ಎಂದು ನೆನಪಿಸಿದರು.

ಹಾಸನದ ಕೇಶವ ನೇತ್ರ್ರಾಲಯ ಮುಖಾಂತರ ಪ್ರತಿವರ್ಷ ಅಶ್ವಿನಿ ಆಸ್ಪತ್ರೆಯ ಶಿಬಿರಕ್ಕೆ ಸಹಯೋಗ ನೀಡುತ್ತಿದ್ದು; (ಮೊದಲ ಪುಟದಿಂದ) ಈ 31 ವರ್ಷಗಳಲ್ಲಿ ಆರು ಸಾವಿರಕ್ಕೂ ಅಧಿಕ ಮಂದಿಗೆ ಕಣ್ಣಿನ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ಮೆಲುಕು ಹಾಕಿದರು.ಈ ಶಿಬಿರದಲ್ಲಿ ಗ್ರಾಮೀಣ ಭಾಗದ ಬಡವರು; ಗಿರಿಜನ ಹಾಡಿ ಮಂದಿ ಸಹಿತ ಕಾರ್ಮಿಕ ವರ್ಗ ಹೆಚ್ಚಿನ ಪ್ರಯೊಜನ ಪಡೆದಿರುವರೆಂದು ಬೊಟ್ಟು ಮಾಡಿದ ಅವರು; ಮನುಷ್ಯನಿಗೆ ಎಲ್ಲಾ ಅಂಗಗಳಿಗಿಂತ ನೇತ್ರ ದೃಷ್ಠಿ ಅತ್ಯಂತ ಮಹತ್ವದ್ದಾಗಿದೆ ಎಂದು ನೆನಪಿಸಿದರು.ರೋಟರಿ ಸಹಕಾರ : ಮಡಿಕೇರಿ ರೋಟರಿ ಸಂಸ್ಥೆಯ ಅಧ್ಯಕ್ಷ ರತನ್ ತಮ್ಮಯ್ಯ ಈ ವೇಳೆ ಶಿಬಿರದ ಯಶಸ್ವಿಗೆ ಕರೆ ನೀಡಿ ರೂ. 5 ಸಾವಿರ ಸಹಾಯಧನ ನೀಡಿದರು. ಹಿರಿಯ ವೈದ್ಯ ಡಾ. ಪಾಟ್ಕರ್ ಅವರು ರೂ. 5 ಸಾವಿರ ನೆರವು ನೀಡಿದ್ದನ್ನು ಅಶ್ವಿನಿ ಪ್ರಮುಖರಿಗೆ ಹಸ್ತಾಂತರಿಸಿದರು.

ಎಲ್ಲಾ ಮುಂಜಾಗ್ರತೆ : ಅಶ್ವಿನಿ ವೈದ್ಯಾಧಿಕಾರಿ ಡಾ. ಪಿ.ಎಂ. ಕುಲಕರ್ಣಿ ಈ ವೇಳೆ ಪ್ರತಿಕ್ರಿಯಿಸಿ; ಜಿಲ್ಲೆಯು ಸೇರಿದಂತೆ ಪಿರಿಯಾಪಟ್ಟಣ ಮುಂತಾದ 55 ಕಡೆಗಳಲ್ಲಿ ವೈದ್ಯರ ತಂಡ ನೇತ್ರ ಸಮಸ್ಯೆ ಇರುವವರನ್ನು ಗುರುತಿಸಿ ಶಿಬಿರಕ್ಕೆ ಭಾಗವಹಿಸಲು ಸಹಕರಿಸಿದ್ದಾಗಿ ನೆನಪಿಸಿದರು. ಅಲ್ಲದೆ ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆಯಿಂದ ಯಾವದೇ ಸಾಂಕ್ರಮಿಕ ರೋಗ ಉಂಟಾಗದಂತೆ ಶುಚಿತ್ವಕ್ಕೆ ಒತ್ತು ನೀಡುವದರೊಂದಿಗೆ ಮುಂಜಾಗ್ರತೆ ವಹಿಸಲಾಗಿದೆ ಎಂದರು.

ಈ ಶಿಬಿರದ ಯಶಸ್ವಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ; ಅಂಧತ್ವ ನಿವಾರಣಾ ಸಂಸ್ಥೆ ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ವೈದ್ಯರುಗಳಾದ ಡಾ. ಶಿವಪ್ರಸಾದ್, ಡಾ. ಶ್ರೀಧರ್, ಡಾ. ವಿಶ್ವನಾಥ್, ಡಾ. ದೇವಯ್ಯ, ಡಾ. ಅರುಣಾ, ಡಾ. ಸುಧಾಕರ್, ಡಾ. ಶ್ಯಾಂ, ಡಾ. ರಾಜಾರಾಂ, ಡಾ. ಜ್ಯೋತಿ, ಡಾ. ಪದ್ಮನಾಭ ಮೊದಲಾದವರು ಸಹಕಾರ ನೀಡುತ್ತಿರುವದಾಗಿ ಅವರು ಮಾಹಿತಿ ನೀಡಿದರು.

1772 ಮಂದಿಯ ತಪಾಸಣೆ : ಆ ಪ್ರಕಾರ ಇದುವರೆಗೆ 1772 ಮಂದಿಯ ಕಣ್ಣು ತಪಾಸಣೆ ಮಾಡಲಾಗಿದೆ; ಈ ಪೈಕಿ 257 ಮಂದಿಯನ್ನು ನೇತ್ರ ಚಿಕಿತ್ಸೆಗಾಗಿ ಇದುವರೆಗೆ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ ಎಂದು; ಆಸ್ಪತ್ರೆ ಆಡಳಿತ ಮಂಡಳಿಯ ಎಂ.ಸಿ. ಗೋಖಲೆ ಅವರು ತಿಳಿಸಿದರು. ಈ ಸಂದರ್ಭ ಟಿ.ಎ. ಶೆಣೈ, ಡಿ.ಹೆಚ್. ತಮ್ಮಪ್ಪ ಮೊದಲಾದವರು ಹಾಜರಿದ್ದರ