ಮಡಿಕೇರಿ, ನ. 15: ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ಜಾರಿಗೆ ಬಂದು 30 ವರ್ಷಗಳಾಗುತ್ತಿರುವ ಹಿನ್ನೆಲೆ ನವೆಂಬರ್ ತಿಂಗಳಿನಲ್ಲಿ ಮಕ್ಕಳ ಹಕ್ಕುಗಳ ಹಬ್ಬ ಆಚರಿಸಬೇಕಿದ್ದು, ಇದರ ಅಂಗವಾಗಿ ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಜಾಥಾ, ಮಕ್ಕಳ ಹಕ್ಕುಗಳ ಪ್ರಬಂಧ, ರಸಪ್ರಶ್ನೆ ಕಾರ್ಯಕ್ರಮ ಆರಂಭಗೊಂಡಿದೆ. ತಾ. 19 ರಂದು ನಾಪೋಕ್ಲು, ತಾ. 22 ರಂದು ಚೇರಂಬಾಣೆ, ತಾ. 30 ರಂದು ಸಂಪಾಜೆ, ಡಿಸೆಂಬರ್ 2 ರಂದು ಭಾಗಮಂಡಲ ಸರ್ಕಾರಿ ಪ್ರೌಢಶಾಲೆಗಳಲ್ಲಿ, ತಾ. 20 ರಂದು ವೀರಾಜಪೇಟೆ ತಾಲೂಕಿನ ಕುಟ್ಟ, ತಾ. 25 ರಂದು ತಿತಿಮತಿ, ತಾ. 26 ರಂದು ಅಮ್ಮತ್ತಿ, ತಾ. 27 ರಂದು ಪಾಲಿಬೆಟ್ಟ, ಡಿಸೆಂಬರ್ 3 ರಂದು ಬಾಳೆಲೆ ಸರ್ಕಾರಿ ಪ್ರೌಢಶಾಲೆಗಳಲ್ಲಿ ಹಾಗೂ ತಾ. 16 ರಂದು ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ, ತಾ. 18 ರಂದು ಕುಶಾಲನಗರ, ತಾ. 21 ರಂದು ಶನಿವಾರಸಂತೆ, ತಾ. 28 ರಂದು ಆಲೂರು-ಸಿದ್ದಾಪುರ ಮತ್ತು ತಾ. 29 ರಂದು ಚೆಟ್ಟಳ್ಳಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಹತ್ತಿರದಲ್ಲಿರುವ ಶಾಲೆಯ ಮಕ್ಕಳು ಹೆಸರನ್ನು ನೋಂದಾಯಿಸಿ ಕೊಳ್ಳಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅರುಂಧತಿ ಕೋರಿದ್ದಾರೆ.