ನಾಪೆÇೀಕ್ಲು, ನ. 15: ಸುಂದರ ಪರಿಸರ, ಮುಗಿಲೆತ್ತರದ ಮರಗಳು, ಕೆಳಭಾಗದಲ್ಲಿ ನಳನಳಿಸುತ್ತಾ ಅತಿಥಿಗಳನ್ನು ಸ್ವಾಗತಿಸುವ ಕಾಫಿ ಗಿಡಗಳು, ಕಾಫಿ ಹಣ್ಣುಗಳು ಒಂದೆಡೆಯಾದರೆ ದಿನದಲ್ಲಿ ಆಗೊಮ್ಮೆ - ಈಗೊಮ್ಮೆ ರಸ್ತೆಯಲ್ಲಿ ಓಡಾಡುವ ಬಸ್, ವಾಹನಗಳನ್ನು ಹೊರತು ಪಡಿಸಿದರೆ ಅದೇ ಜನ, ಅದೇ ಮಾತು. ಇದು ನೆಲಜಿ ಗ್ರಾಮದ ದೈನಂದಿನ ಕಥೆ. ಆದರೆ ರಸ್ತೆಯ ತುಂಬಾ ವಾಹನ ದಟ್ಟಣೆ, ಎಲ್ಲೆಲ್ಲಿಯೂ ಜನ, ಎಲ್ಲರ ಹೆಗಲಿನಲ್ಲಿ, ಕೈಯಲ್ಲಿ ಕೋವಿ, ಕೋವಿಯಿಂದ ಸಿಡಿಯುವ ಗುಂಡಿನ ಶಬ್ಧ, ಹಲವರ ಮೊಗದಲ್ಲಿ ಸಂತೃಪ್ತಿಯ ಭಾವನೆ ಮತ್ತು ಕೆಲವರಲ್ಲಿ ದುಗುಡ, ಆತಂಕ. ಗಂಡು ಹೆಣ್ಣು, ಹಿರಿಯ ಕಿರಿಯ ಎಂಬ ಬೇಧವಿಲ್ಲದೆ ಎಲ್ಲರೂ ಸಂತೋಷ ದಿಂದ ಪಾಲ್ಗೊಂಡಿದ್ದ ವಾತಾವರಣ ಸೃಷ್ಟಿಯಾಗಿತ್ತು. (ಮೊದಲ ಪುಟದಿಂದ) ಇದು ನೆಲಜಿ ಫಾರ್ಮರ್ಸ್ ರಿಕ್ರಿಯೇಷನ್ ಮತ್ತು ಡೆವಲಪ್‍ಮೆಂಟ್ ಅಸೋಷಿಯೇಶನ್ ವತಿಯಿಂದ ನೆಲಜಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ತೆಂಗಿನಕಾಯಿಗೆ ಗುಂಡು ಹಾರಿಸುವ ಸ್ಪರ್ಧೆಯ ಚಿತ್ರಣ.

ಕಾರ್ಯಕ್ರಮವನ್ನು ತಾಮರ ಕೂರ್ಗ್‍ನ ಸಲಹೆಗಾರ ಪಾಲೆಕಂಡ ಸಾಯಿ ಕರುಂಬಯ್ಯ ದೀಪ ಬೆಳಗಿಸಿ, ತೆಂಗಿನಕಾಯಿಗೆ ಗುಂಡು ಹಾರಿಸುವ ಮೂಲಕ ಉದ್ಘಾಟಿಸಿದರು.

ಸ್ಪರ್ಧೆಯ ಮೊದಲನೇ ವಿಭಾಗದಲ್ಲಿ ಪಟ್ರಪಂಡ ನಿತಿನ್ ಟ್ರೋಫಿ ಹಾಗೂ ರೂ. 50,000 ನಗದು ಬಹುಮಾನ ಪಡೆದರೆ, ದ್ವಿತೀಯ ಸ್ಥಾನದ ಟ್ರೋಫಿ ಹಾಗೂ ರೂ. 30,000 ನಗದನ್ನು ಬಡುವಂಡ ದೇವಯ್ಯ ಹಾಗೂ ತೃತೀಯ ಸ್ಥಾನದ ಟ್ರೋಫಿ ಮತ್ತು ರೂ. 20,000 ನಗದು ಬಹುಮಾನವನ್ನು ಚೆಪ್ಪುಡಿರ ದರ್ಶನ್ ತನ್ನದಾಗಿಸಿಕೊಂಡರು.

ಎರಡನೆಯ ವಿಭಾಗದಲ್ಲಿ ಪ್ರಥಮ ಬಹುಮಾನದ ಟ್ರೋಫಿ ಹಾಗೂ ರೂ. 5,000 ನಗದನ್ನು ಬಡುವಂಡ ತ್ರಿಶಾಲಿ ದೇವಯ್ಯ, ದ್ವಿತೀಯ ಸ್ಥಾನದ ಟ್ರೋಫಿ ಹಾಗೂ ರೂ. 3,000 ನಗದನ್ನು ನಮಿತಾ ಸುವರ್ಣ ಮತ್ತು ತೃತೀಯ ಸ್ಥಾನದ ಟ್ರೋಫಿ ಹಾಗೂ ರೂ. 2,000 ನಗದನ್ನು ಪಂದ್ಯಡ ಪ್ರಕೃತಿ ಪಡೆದರು. ಚಾಂಪಿಯನ್ ಪಟ್ಟ ಅಲಂಕರಿಸಿದವರಿಗೆ ಮಂಡೇಡ ಗಿರಿ ಅವರು ಆಕರ್ಷಕ ಟ್ರೋಫಿ ನೀಡಿದರೆ, ಗುರಿತಾಗಿಸಿದ ಕೊನೆಯ ಮೂವತ್ತು ಶೂಟರ್ಸ್‍ಗೆ ಬೆಳ್ಳಿಯ ನಾಣ್ಯಗಳನ್ನು ಗೋಣಿಕೊಪ್ಪಲು ಮುಳಿಯ ಜ್ಯುವೆಲರ್ಸ್‍ನ ಮೇರಿಯಂಡ ಬೋಪಣ್ಣ ನೀಡಿದರು.

ಟ್ರೋಫಿಗಳನ್ನು ಬೆಂಗಳೂರಿನ ಚೀಯಕಪೂವಂಡ ಬಿ.ಸಾಬು ಭೀಮಯ್ಯ ಮತ್ತು ಕುಟುಂಬಸ್ಥರು, ನೆಲಜಿ ಗ್ರಾಮದ ಕೋಟೆರ ಶಾಂತಿ ಅಚ್ಚಯ್ಯ, ಬೆಂಗಳೂರಿನ ಬದ್ದಂಜೆಟ್ಟಿರ ಸನ್ನಿ ಉತ್ತಪ್ಪ, ಮಡಿಕೇರಿಯ ಡಾ. ಮೊಣ್ಣಂಡ ದೇವಯ್ಯ ಉದಾರವಾಗಿ ನೀಡಿದರು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ತಾಮರ ಕೂರ್ಗ್ ರೆಸಾರ್ಟ್ ವಹಿಸಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್‍ನ ಅಧ್ಯಕ್ಷ ಮಂಡೀರ ನಂದಾ ನಂಜಪ್ಪ ವಹಿಸಿದ್ದರು.

ಈ ಸಂದರ್ಭದಲ್ಲಿ ತಾಮರ ಕೂರ್ಗ್‍ನ ಜನರಲ್ ಮ್ಯಾನೇಜರ್ ಸುರೇಶ್ ಬಾಬು, ಮ್ಯಾನೇಜರ್‍ಗಳಾದ ಸುಧೀರ್, ದಿಲೀಪ್ ಕಾಮತ್, ಕಲ್ಯಾಟಂಡ ಗಿರಿ ಸುಬ್ಬಯ್ಯ, ದಾನಿಗಳಾದ ಕೋಟೆರ ಶಾಂತಿ ಅಚ್ಚಯ್ಯ, ಕ್ಲಬ್‍ನ ಉಪಾಧ್ಯಕ್ಷ ಕೈಬುಲಿರ ಉಮೇಶ್ ಉತ್ತಪ್ಪ, ಕಾರ್ಯದರ್ಶಿ ಮಂಡಿರ ಸಚಿನ್ ಗಣಪತಿ, ಎಲ್ಲಾ ನಿರ್ದೇಶಕರು, ಗಣ್ಯರು ಇದ್ದರು.

-ಪಿ.ವಿ.ಪ್ರಭಾಕರ್