ಗೋಣಿಕೊಪ್ಪ ವರದಿ, ನ. 14: ಹಾಕಿಕೂರ್ಗ್ ವತಿಯಿಂದ ಕೋದಂಡ ಎ. ಪೂವಯ್ಯ ಜ್ಞಾಪಕಾರ್ಥ ಪ್ರಾಥಮಿಕ, ಪ್ರೌಢಶಾಲಾ ಬಾಲಕ, ಬಾಲಕಿಯರ ಹಾಕಿ ಟೂರ್ನಿ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ತಾ.15ರಿಂದ (ಇಂದಿನಿಂದ) ತಾ. 17ರವರೆಗೆ ನಡೆಯಲಿದೆ. ಒಟ್ಟು 28 ತಂಡಗಳು ಟೂರ್ನಿಯಲ್ಲಿ ಸೆಣೆಸಲಿವೆ. ಪ್ರಾಥಮಿಕ ಬಾಲಕರಲ್ಲಿ 11, ಬಾಲಕಿಯರ 5, ಪ್ರೌಢ ಬಾಲಕರಲ್ಲಿ 8, ಬಾಲಕಿಯರಲ್ಲಿ 4 ತಂಡಗಳು ಭಾಗವಹಿಸಲಿವೆ.
ಕ್ರೀಡಾ ವಸತಿ ಶಾಲೆಗಳಲ್ಲಿ ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳಿಗೆ ಪ್ರತ್ಯೇಕ ಟೂರ್ನಿ ಆಯೋಜಿಸಲಾಗಿದೆ. ಪೊನ್ನಂಪೇಟೆ ಮತ್ತು ಕೂಡಿಗೆ ವಸತಿ ನಿಲಯ ಬಾಲಕ, ಬಾಲಕಿಯರ ತಲಾ 2 ತಂಡಗಳಿಗೆ ತಾ.17ರಂದುನಡೆಯಲಿದೆ.
ಪಾಲ್ಗೊಳ್ಳಲಿರುವ ತಂಡಗಳು ; ಪ್ರಾಥಮಿಕ ಬಾಲಕರಲ್ಲಿ ಲಯನ್ಸ್ (ಎ), ಮಡಿಕೇರಿ ಜಿಎಂಪಿ, ಸೆಂಟ್ ಆಂಥೋನಿ (ಬಿ), ಕಾಲ್ಸ್, ರೂಟ್ಸ್ (ಎ), ಗುಡ್ ಶೆಫರ್ಡ್, ಭಾರತೀಯ ವಿದ್ಯಾಭವನ್ ಕೊಡಗು ವಿದ್ಯಾಲಯ, ರೂಟ್ಸ್ (ಬಿ), ರಾಮಟ್ರಸ್ಟ್, ಲಯನ್ಸ್ (ಬಿ), ಚಿನ್ಮಯ ವಿದ್ಯಾಲಯ, ಪ್ರಾಥಮಿಕ ಬಾಲಕಿಯರಲ್ಲಿ ಮಡಿಕೇರಿ ಜಿಎಂಪಿ, ಲಿಟಲ್ ಫ್ಲವರ್, ಗೋಣಿಕೊಪ್ಪ ಲಯನ್ಸ್, ರೂಟ್ಸ್, ಸೆಂಟ್ ಆಂಥೋನಿ, ಪ್ರೌಢ ಬಾಲಕರಲ್ಲಿ ಪೊನ್ನಂಪೇಟೆ ಸರ್ಕಾರಿ ಶಾಲೆ, ಪ್ರಗತಿ, ಗೋಣಿಕೊಪ್ಪ ಲಯನ್ಸ್, ವೀರಾಜಪೇಟೆ ಸೆಂಟ್ ಆನ್ಸ್, ಕಾಪ್ಸ್, ವೀರಾಜಪೇಟೆ ರೋಟರಿ, ನಾಪೋಕ್ಲು ರಾಮ ಟ್ರಸ್ಟ್, ಪೊನ್ನಂಪೇಟೆ ಸೆಂಟ್ ಆಂಥೋನಿ, ಬಾಲಕಿಯರಲ್ಲಿ ಲಯನ್ಸ್, ಸರ್ಕಾರಿ ಪ್ರೌಢಶಾಲೆ, ಕಾಲ್ಸ್, ಚಿನ್ಮಯ ಶಾಲಾ ತಂಡಗಳು ಪಾಲ್ಗೊಳ್ಳಲಿವೆ ಎಂದು ಹಾಕಿಕೂರ್ಗ್ ಪ್ರಕಟಣೆ ತಿಳಿಸಿದೆ.