ಕುಶಾಲನಗರ, ನ. 15: ಕುಶಾಲನಗರ ಗಣಪತಿ ದೇವಾಲಯ ರಥೋತ್ಸವ ಮತ್ತು ಉತ್ಸವ ಹಿನ್ನೆಲೆಯಲ್ಲಿ ಕುಶಾಲನಗರ ದೇವಾಲಯಗಳ ಒಕ್ಕೂಟದ ಪದಾಧಿಕಾರಿಗಳು ದೇವಸ್ಥಾನಕ್ಕೆ ತೆರಳಿ ಫಲತಾಂಬೂಲ ಅರ್ಪಿಸಿ ಸಾಮೂಹಿಕ ಪೂಜೆ ಸಲ್ಲಿಸಿದರು.
ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯ, ಕನ್ನಿಕಾ ಪರಮೇಶ್ವರಿ ದೇವಾಲಯ, ಆಂಜನೇಯ ದೇವಾಲಯ, ಸೋಮೇಶ್ವರ ದೇವಾಲಯ, ಗೌರಿಗಣೇಶ ದೇವಾಲಯ, ಹೌಸಿಂಗ್ ಬೋರ್ಡ್ ಸುಬ್ರಮಣ್ಯ ದೇವಾಲಯ, ಬಲಮುರಿ ಗಣಪತಿ ದೇವಾಲಯ, ಸಾಯಿಬಾಬಾ ದೇವಾಲಯ, ಕೋಣಮಾರಿಯಮ್ಮ ದೇವಾಲಯ, ಕಾವೇರಿ ಆರತಿ ಬಳಗದ ಪ್ರತಿನಿಧಿಗಳು ಪೂಜೆಯಲ್ಲಿ ಪಾಲ್ಗೊಂಡರು.
ಗಣಪತಿ ದೇವಾಲಯದ ಅಧ್ಯಕ್ಷರು ಮತ್ತು ಕಾರ್ಯಕಾರಿ ಮಂಡಳಿ ಸದಸ್ಯರು ದೇವಾಲಯ ಪ್ರತಿನಿಧಿಗಳನ್ನು ಬರಮಾಡಿಕೊಂಡರು. ಮುಖ್ಯ ಅರ್ಚಕ ಆರ್.ಕೆ.ನಾಗೇಂದ್ರ ಬಾಬು ಅವರ ನೇತೃತ್ವದಲ್ಲಿ ವಿಶೇಷ ಪೂಜಾ ವಿಧಿವಿಧಾನಗಳು ಜರುಗಿದವು.
ಗಣಪತಿ ದೇವಸ್ಥಾನ ಸೇವಾ ಸಮಿತಿಯ ಖಜಾಂಚಿ ಹಾಗೂ ಒಕ್ಕೂಟದ ಅಧ್ಯಕ್ಷರಾದ ಎಂ.ಕೆ.ದಿನೇಶ್, ವಿ.ಡಿ.ಪುಂಡರೀಕಾಕ್ಷ, ಎಚ್.ಎನ್.ರಾಮಚಂದ್ರ, ಒಕ್ಕೂಟದ ಕಾರ್ಯಾಧ್ಯಕ್ಷ ಕೆ.ಆರ್.ಶಿವಾನಂದನ್, ಪ್ರಧಾನ ಕಾರ್ಯದರ್ಶಿ ಎಂ.ಎನ್.ಚಂದ್ರಮೋಹನ್, ಉಪಾಧ್ಯಕ್ಷರಾದ ವಿ.ಪಿ.ನಾಗೇಶ್, ಡಿ.ಆರ್.ಚಿಕ್ಕೇಗೌಡ, ಖಜಾಂಚಿ ಎಸ್.ಕೆ.ಶ್ರೀನಿವಾಸರಾವ್, ಸಂಘಟನಾ ಕಾರ್ಯದರ್ಶಿ ಡಿ.ಆರ್.ಸೋಮಶೇಖರ್ ಮತ್ತು ವಿವಿಧ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ಇದ್ದರು.
ಕುಶಾಲನಗರ ಗಣಪತಿ ದೇವಸ್ಥಾನಕ್ಕೆ ದಾನಿಗಳು ವಿವಿಧ ರೀತಿಯ ಕೊಡುಗೆಗಳನ್ನು ನೀಡಿದ್ದಾರೆ. ಸ್ಥಳೀಯ ಉದ್ಯಮಿ ಸಹದೇವನ್ ನಂಬಿಯಾರ್ ಅವರು ಅಂದಾಜು 1 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಉತ್ಸವ ಮೂರ್ತಿಯ ಬೆಳ್ಳಿ ಕವಚ, ಸ್ಥಳೀಯರಾದ ಕೆ.ಎಸ್.ಮಾಧವರಾವ್ ಅವರು ಸುಮಾರು 75 ಸಾವಿರ ಮೌಲ್ಯದ ಬೆಳ್ಳಿಯ ಪ್ರಭಾವಳಿ, ಸ್ಥಳೀಯ ವಿಷ್ಣು ಮೆಟಲ್ ಉದ್ಯಮಿ ಬೆಳ್ಳಿ ದೀಪ ಮತ್ತು ಮುಖ್ಯ ಅರ್ಚಕರಾದ ಆರ್.ಕೆ. ನಾಗೇಂದ್ರಬಾಬು ಅವರು ಮೂಲ ವಿಗ್ರಹಕ್ಕೆ ಪಂಚಲೋಹದ ವಿಗ್ರಹ ಸಾಮಗ್ರಿಗಳನ್ನು ನೀಡಿರುವದಾಗಿ ದೇವಸ್ಥಾನ ಸಮಿತಿ ಅಧ್ಯಕ್ಷ ವಿ.ಎನ್.ವಸಂತಕುಮಾರ್ ಮಾಹಿತಿ ನೀಡಿದ್ದಾರೆ.