ಮಡಿಕೇರಿ, ನ. 15 : ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯ ಸುಭಾಷ್ ಯುವಕ ಸಂಘದಿಂದ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ 20ನೇ ವರ್ಷದ ದಸರಾ ಕ್ರೀಡಾಕೂಟದ ಸಮಾರೋಪ ಸಮಾರಂಭ ತಾ.17ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಡಿಕೇರಿ ಕ್ಷೇತ್ರದ ಶಾಸಕÀ ಎಂ.ಪಿ. ಅಪ್ಪಚ್ಚು ರಂಜನ್, ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷ ಪಿ.ಕೆ. ಜಗದೀಶ್, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಬಿ. ತಿಮ್ಮಪ್ಪ, ಕಂಬಿಬಾಣೆ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಬಿ. ಕೃಷ್ಣ, ನಲ್ಲೂರು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಬಿ.ಎಂ. ಮುಸ್ತಫಾ, 7ನೇ ಹೊಸಕೋಟೆ ಗ್ರಾಪಂ ಸದಸ್ಯ ಅಬ್ದುಲ್ಲಾಕುಟ್ಟಿ, ಇ.ಬಿ. ಜೋಸೆಫ್, ಕಂಬಿಬಾಣೆ ಸ.ಹಿ.ಪ್ರಾ ಶಾಲೆಯ ಮುಖ್ಯೋಪಾಧ್ಯಾಯ ಕೆ.ಬಿ. ಪ್ರಕಾಶ್, ನಿವೃತ್ತ ಶಿಕ್ಷಕಿ ಕಮಲಾಕ್ಷಿ, ಕಮಲ ನೆಹರು ಮಂಡಳಿ ಮಾಜಿ ಅಧ್ಯಕ್ಷೆ ಶೋಭಾ ಸೋಮಯ್ಯ, ಸುಭಾಷ್ ಯುವಕ ಸಂಘದ ಗೌರವಾಧ್ಯಕ್ಷ ಮೊಯ್ದು ಮತ್ತಿತರರು ಭಾಗವಹಿಸಲಿದ್ದಾರೆ. ಕಂಬಿಬಾಣೆ ಸುಭಾಷ್ ಯುವಕ ಸಂಘದ ಅಧ್ಯಕ್ಷ ಮೋಹನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಸಮಾರೋಪ ಸಮಾರಂಭದ ಅಂಗವಾಗಿ ಅಂದು ಬೆಳಗ್ಗಿನಿಂದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪುರುಷರಿಗೆ ಹಗ್ಗ-ಜಗ್ಗಾಟ, ಭಾರದ ಗುಂಡು ಎಸೆತ, 100 ಮೀ ಓಟ, ನಿಧಾನ ಬೈಕ್ ರೇಸ್, ಎತ್ತರ ಜಿಗಿತ, ಉದ್ದ ಜಿಗಿತ ಹಾಗೂ ಸಂಘದ ಸದಸ್ಯರಿಗೆ ಕೇರಂ ಸಿಂಗಲ್ಸ್, ಡಬಲ್ಸ್, ಚೆಸ್ ನಡೆಯಲಿದೆ. ಮಹಿಳೆಯರಿಗೆ ಹಗ್ಗ-ಜಗ್ಗಾಟ, ಭಾರದ ಗುಂಡು ಎಸೆತ, 100 ಮೀ ಓಟ, ನಿಂಬೆ ಚಮಚ ಓಟ, ಪಾಸಿಂಗ್ ದ ಬಾಲ್, ಸಂಗೀತ ಕುರ್ಚಿ, ಇಟ್ಟಿಗೆ ಹಿಡಿತ ಸ್ಪರ್ಧೆಗಳು ನಡೆಯಲಿದೆ. ಶಾಲಾ ಮಕ್ಕಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಕ್ರೀಡಾಕೂಟದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಂಬಿಬಾಣೆ ಸುಭಾಷ್ ಯುವಕ ಸಂಘದ ಅಧ್ಯಕ್ಷ ಮೋಹನ್ 6363773679, ಕಾರ್ಯದರ್ಶಿ ಎಸ್. ಅವಿನಾಶ್ 9743036467 ಅವರನ್ನು ಸಂಪರ್ಕಿಸಬಹುದಾಗಿದೆ.