ಭಾಗಮಂಡಲ, ನ. 15: ಭಾಗಮಂಡಲದ ಭಗಂಡೇಶ್ವರ ದೇವಾಲಯದ ಯಾತ್ರಿ ನಿವಾಸಕ್ಕೆ ಇಂದು ಭೂಮಿ ಪೂಜೆಯನ್ನು ಶಾಸಕ ಕೆ.ಜಿ.ಬೋಪಯ್ಯ ನೆರವೇರಿಸಿದರು.
ದೇವಾಲಯದ ಹಿಂಭಾಗದಲ್ಲಿ 94 ಲಕ್ಷ ರೂ. ವೆಚ್ಚದಲ್ಲಿ ಎರಡು ಅಂತಸ್ತಿನ ಕಟ್ಟಡ ನಿರ್ಮಾಣ ವಾಗಲಿದ್ದು 80ಲಕ್ಷ ರೂ. ಸರ್ಕಾರದಿಂದ ಅನುದಾನ ದೊರೆತಿದೆ. ಬಾಕಿ 14ಲಕ್ಷ ರೂ. ದೇವಾಲಯದ ವತಿಯಿಂದ ಭರಿಸಿ ಕಟ್ಟಡ ನಿರ್ಮಾಣವಾಗಲಿದ್ದು ಕೆಳಭಾಗದಲ್ಲಿ ಸಮಾರಂಭಗಳಿಗೆ ವ್ಯವಸ್ಥೆ ಹಾಗೂ ಮೇಲ್ಭಾಗವನ್ನು ನಿವಾಸಕ್ಕೆ ಬಳಸಿಕೊಳ್ಳುವ ಉದ್ದೇಶದಿಂದ ನಿರ್ಮಿಸಲಾಗುತ್ತಿದೆ.
ಈ ಸಂದರ್ಭ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾಪ್ರಭಾಕರ್ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್. ಗ್ರಾಮ ಪಂಚಾಯಿತಿ ಸದಸ್ಯ ರಾಜುರೈ, ತಲಕಾವೇರಿ - ಭಾಗಮಂಡಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಸದಸ್ಯರಾದ ಮೀನಾಕ್ಷಿ, ಸುಭಾಷ್, ರಮೇಶ್,
ಡಾ. ಕಾವೇರಪ್ಪ, ನಾರಾಯಣಾ ಚಾರ್, ಇನ್ನಿತರರು ಉಪಸ್ಥಿತರಿದ್ದರು.