ಸಿದ್ದಾಪುರ, ನ. 14: ಕಕ್ಕಟ್ಟುಕಾಡುವಿನ ಮಹಾತ್ಮ ಗಾಂಧಿ ವಿವಿದೋದ್ದೇಶ ಸ್ವ ಸಹಾಯ ಸಂಘದ ವತಿಯಿಂದ ಗುಹ್ಯ ಗ್ರಾಮ ಮಟ್ಟದ ಗ್ರಾಮೀಣ ಕ್ರೀಡಾಕೂಟವು ತಾ.17 ರಂದು ಕಕ್ಕಟ್ಟುಕಾಡುವಿನಲ್ಲಿ ನಡೆಯಲಿದೆ.

ಬೆಳಗ್ಗೆ 9 ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದ್ದು, ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ಪುರುಷರಿಗೆ ವಿವಿಧ ಕ್ರೀಡಾ ಸ್ಪರ್ಧೆ ನಡೆಯಲಿದೆ. ಗ್ರಾಮ ಮಟ್ಟದ ಕಬ್ಬಡ್ಡಿ, ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದ್ದು, ಸಂಜೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದೆ.