ವೀರಾಜಪೇಟೆ, ನ. 14: ವೀರಾಜಪೇಟೆ ತಾಲೂಕಿನ 6 ಗ್ರಾಮ ಪಂಚಾಯಿತಿಗಳಿಗೆ ತಾ. 12 ರಂದು ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ 4, ಬಿಜೆಪಿ 2 ಅಭ್ಯರ್ಥಿಗಳು ಜಯ ಗಳಿಸಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದಾರೆ. ಇಂದು ತಾಲೂಕು ಕಚೇರಿಯ ಸಭಾಂಗಣದಲ್ಲಿ ಮತಗಳ ಎಣಿಕಾ ಕಾರ್ಯ ನಡೆಯಿತು. ಕುಟ್ಟ, ಗೋಣಿಕೊಪ್ಪ, ಒಂಟಿಯಂಗಡಿ, ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿಗಳಲ್ಲಿ ನಡೆದ ಒಂದು ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ, ಹಾತೂರು ಹಾಗೂ ಅಮ್ಮತ್ತಿ ಒಂಟಿಯಂಗಡಿ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದ್ದಾರೆÉ.ಗೋಣಿಕೊಪ್ಪ ನಜೀರ್ 406 (ಕಾಂಗ್ರೆಸ್), ತಸ್ಲಿಂ ಆರೀಫ್ 245 (ಬಿಜೆಪಿ ಸೋತವರು) ಕುಟ್ಟ್ಟ ವಿನೋದ್ 306 (ಕಾಂಗ್ರೆಸ್), ತಿಮ್ಮಯ್ಯ 194 (ಬಿಜೆಪಿ ಸೋತವರು) ಒಂಟಿಯಂಗಡಿ ಕಲ್ಪೇಶ್ 310 (ಕಾಂಗ್ರೆಸ್), ದರ್ಶನ್ ಕಾವೇರಪ್ಪ 191 (ಬಿಜೆಪಿ ಸೋತವರು) ಬಿ. ಶೆಟ್ಟಿಗೇರಿ ಪವಿ ತಂಗಮ್ಮ 399 (ಕಾಂಗ್ರೆಸ್), ನಾಮೇರ ಸೀತಮ್ಮ 320 (ಬಿಜೆಪಿ), ಅಮ್ಮತ್ತಿ ಕಾರ್ಮಾಡು ವಿದ್ಯಾ 258 (ಬಿಜೆಪಿ), ಸದಿ 149 (ಕಾಂಗ್ರೆಸ್ ಸೋತವರು), ಹಾತೂರು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎರವರ ಪವನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.