ವೀರಾಜಪೇಟೆ, ನ. 15: ವೀರಾಜಪೇಟೆ ತಾಲೂಕಿನ ಕಣ್ಣಂಗಾಲ ಗ್ರಾಮ ಪಂಚಾಯಿತಿಗೆ ತಾ. 12ರಂದು ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಒಕ್ಕಲಿಗರ ಕಲ್ಪೇಶ್ 119 ಮತಗಳಿಂದ ಭರ್ಜರಿ ಗೆಲವನ್ನು ಸಾಧಿಸಿದ್ದಾರೆ. ಕಣ್ಣಂಗಾಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿದ್ದ ಮನೋಜ್ ಅವರ ಅಕಾಲಿಕ ಮರಣದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಣ್ಣಂಗಾಲ ಗ್ರಾಮದ ಒಕ್ಕಲಿಗರ ಜಿ. ಪ್ರಭು ಅವರ ಪುತ್ರ ಒಕ್ಕಲಿಗರ ಪಿ. ಕಲ್ಪೇಶ್ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಬೆಂಬಲ ಪಡೆದು ಪಕ್ಷೇತರವಾಗಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ದರ್ಶನ್ ಕಾವೇರಪ್ಪ ವಿರುದ್ಧ 119 ಮತಗಳಿಂದ ಜಯಗಳಿಸಿದ್ದಾರೆ. ಕಲ್ಪೇಶ್‍ಗೆ 310 ಮತಗಳು ಮತ್ತು ದರ್ಶನ್ 191 ಮತಗಳನ್ನು ಪಡೆದಿದ್ದಾರೆ.