ಕುಶಾಲನಗರ, ನ 15: ಕುಶಾಲನಗರ ಅತ್ತೂರು ಹಾರಂಗಿ ಜ್ಞಾನಗಂಗಾ ವಸತಿ ಶಾಲೆ, ಗುಡ್ಡೆಹೊಸೂರು ಐಶ್ವರ್ಯ ಸ್ವತಂತ್ರ ಪಿ.ಯು.ಕಾಲೇಜು ಆಶ್ರಯದಲ್ಲಿ ತಾ. 16 ರಂದು (ಇಂದು) ಮ್ಯಾರಥಾನ್ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಸೇವ್ ಕಾವೇರಿ, ಸೇವ್ ಕೊಡಗು ಘೋಷಣೆಯೊಂದಿಗೆ ಕುಶಾಲನಗರದ ಸೈನಿಕ ಶಾಲೆ ಮತ್ತು ಸ್ಥಳೀಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾರ್ಯಕ್ರಮ ಸಂಘಟಕ ಪುಲಿಯಂಡ ರಾಮ್ ದೇವಯ್ಯ ತಿಳಿಸಿದ್ದಾರೆ.
ಬೆಳಿಗ್ಗೆ 6.30 ಕ್ಕೆ ಕುಶಾಲನಗರ ಗಣಪತಿ ದೇವಾಲಯ ಮುಂಭಾಗದಿಂದ ಗುಡ್ಡೆಹೊಸೂರು ತನಕ ನೂರಾರು ವಿದ್ಯಾರ್ಥಿಗಳು ಈ ಮ್ಯಾರಥಾನ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.