ಶನಿವಾರಸಂತೆ, ನ. 13: ಶನಿವಾರಸಂತೆಯಲ್ಲಿ ಇತ್ತೀಚೆಗೆ ನಡೆದ ಕೊಡಗು ಜಿಲ್ಲಾ ಜೆ.ಡಿ.ಎಸ್. ಸಭೆಯಲ್ಲಿ ಕೊಡಗು ಜಿಲ್ಲಾ ಜೆ.ಡಿ.ಎಸ್. ಪರಿಶಿಷ್ಟ ಪಂಗಡದ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ಅಮ್ಮತ್ತಿ ಜಯಮ್ಮ, ಮಡಿಕೇರಿ ಕ್ಷೇತ್ರದ ಪರಿಶಿಷ್ಟ ಜಾತಿ ಮಹಿಳಾ ಘಟಕದ ಅಧ್ಯಕ್ಷರಾಗಿ ಲತಾ ದೇವರಾಜ್ ಹಾಗೂ ಸೋಮವಾರಪೇಟೆ ತಾಲೂಕು ಹಿಂದುಳಿದ ವರ್ಗದ ಅಧ್ಯಕ್ಷರಾಗಿ ನಿವೃತ್ತ ಆರೋಗ್ಯ ಇಲಾಖೆಯ ಅಧಿಕಾರಿ ನಾಗರಾಜ್ ಆಚಾರ್ಯ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭ ಮಾತನಾಡಿದ ರಾಜ್ಯ ಜೆ.ಡಿ.ಎಸ್. ನಾಯಕ ಸಂಕೇತ್ ಪೂವಯ್ಯ, ಜನರು ಈಗಾಗಲೇ ಕೇಂದ್ರ ಮತ್ತು ರಾಜ್ಯ ಬಿ.ಜೆ.ಪಿ. ಸರಕಾರದಿಂದ ಭ್ರಮನಿರಸರಾಗಿದ್ದಾರೆ ಎಂದರು. ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ಕೆ.ಎಂ.ಬಿ. ಗಣೇಶ್ ಮಾತನಾಡಿ, ಪಕ್ಷದ ಬಲವರ್ಧನೆಗೊಳ್ಳುತ್ತಿದ್ದು, ಅನೇಕ ಕಾಂಗ್ರೆಸ್ ಹಾಗೂ ಬಿ.ಜೆ.ಪಿ. ಕಾರ್ಯಕರ್ತರು ಜೆ.ಡಿ.ಎಸ್. ಕಡೆಗೆ ವಾಲುತ್ತಿದ್ದು, ಸದ್ಯದಲ್ಲೇ ಜಿಲ್ಲೆಯಲ್ಲಿ ಒಂದು ಬೃಹತ್ ಸಮಾವೇಶ ನಡೆಸಲಾಗುವದೆಂದರು.

ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್. ಮುತ್ತೇಗೌಡ, ಡಿ.ಬಿ. ಬೋಜಪ್ಪ, ಪ್ರಧಾನ ಕಾರ್ಯದರ್ಶಿ ಆದಿಲ್ ಪಾಶ, ಕಾರ್ಯದರ್ಶಿ ಪಾಪಣ್ಣ, ತಾಲೂಕು ಅಧ್ಯಕ್ಷ ನಾಗರಾಜ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಶಾಂತಿ ಅಚ್ಚಯ್ಯ, ಡೆನ್ನಿಬರೋಸ್, ಸುನಿಲ್, ಕಿಬ್ಬೆಟ್ಟ ಮಂದಣ್ಣ, ರವಿಕುಮಾರ್, ಮಹಿಳಾ ಅಧ್ಯಕ್ಷೆ ಕುಸುಮಾ ಸುಧಾಕರ್, ಕುಸುಮಾವತಿ, ವೀರಾಜಪೇಟೆ ಅಧ್ಯಕ್ಷ ಮಂಜುನಾಥ್, ಶಶಿ, ಬಸವರಾಜ್, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.