ಮಡಿಕೇರಿ, ನ. 13: ಶ್ರೀ ರಾಮಾಂಜನೇಯ ಭಜನಾ ಮಂಡಳಿ ಹಾಗೂ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಸಹಯೋಗದಲ್ಲಿ ತಾ. 24 ರಂದು ಸೂರ್ಯೋದಯದಿಂದ ಸೂರ್ಯಾಸ್ತ ತನಕ ಶ್ರೀ ಆಂಜನೇಯ ಗುಡಿಯಲ್ಲಿ ಏಕಾಹ ಭಜನೆ ಏರ್ಪಡಿಸಲಾಗಿದೆ.

29ನೇ ವಾರ್ಷಿಕ ಭಜನೋತ್ಸವಕ್ಕೆ ಚೌಡೇಶ್ವರಿ ದೇವಾಲಯದ ಅರ್ಚಕ ಸತ್ಯೇಶ್ ಭಟ್ ಬೆಳಿಗ್ಗೆ 6.30ಕ್ಕೆ ಚಾಲನೆ ನೀಡಲಿದ್ದು, ಸಂಜೆ 7 ಗಂಟೆಗೆ ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರು ಉಪನ್ಯಾಸ ನೀಡಲಿದ್ದಾರೆ. ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್ ಅವರು ಪಾಲ್ಗೊಳ್ಳಲಿದ್ದು, ಹದಿನೈದು ಭಜನಾ ತಂಡಗಳು ಭಗವಹಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.