ಮಡಿಕೇರಿ, ನ. 13: ಇಲ್ಲಿನ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡ ರಾಮ ದೇವಾಲಯ ವತಿಯಿಂದ ಆಚರಿಸಲ್ಪಡುವ ರಾಮೋತ್ಸವ ಸಂಬಂಧ ಶ್ರೀ ರಾಮ ಸೇವಾ ಸಮಿತಿಯನ್ನು ತಾ. 9 ರಂದು ನಡೆದ ಸಭೆಯಲ್ಲಿ ಪುನರ್ರಚಿಸಲಾಯಿತು.

ಅಧ್ಯಕ್ಷರಾಗಿ ಹೆಚ್.ಸಿ. ತಿಮ್ಮಯ್ಯ ಪುನರಾಯ್ಕೆಗೊಂಡರು. ಉಪಾಧ್ಯಕ್ಷರಾಗಿ ಪರಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ಆರ್. ವಿಶ್ವನಾಥ್, ಕಾರ್ಯದರ್ಶಿಯಾಗಿ ಆರ್. ಚಂದ್ರಶೇಖರ್, ಖಜಾಂಚಿ ಯಾಗಿ ಕಾಳಪ್ಪ ನೇಮಕಗೊಂಡರು. ಸಮಿತಿಯ ಸಹ ಕಾರ್ಯದರ್ಶಿಗಳಾಗಿ ಕೆ. ಹರೀಶ್ ಹಾಗೂ ಹನುಮಂತ, ನಿರ್ದೇಶಕರು ಗಳಾಗಿ ಹೆಚ್.ಕೆ. ಸುರೇಶ್, ಹೆಚ್.ಎನ್. ಮಹೇಶ್, ರಾಜಕುಮಾರ್, ಗಿರೀಶ್ ಭೀಮಯ್ಯ, ಹೆಚ್.ಪಿ. ಕುಮಾರ್, ಸೋಮಶೇಖರ್, ಡಿ. ಶೇಖರ್, ಸುಬ್ರಮಣಿ, ಹೆಚ್.ಆರ್. ಜಗದೀಶ್, ಹೆಚ್.ಎಸ್. ಗೋಪಿನಾಥ್ ಸರ್ವಾನು ಮತದಿಂದ ಆಯ್ಕೆಗೊಂಡರು. ರಾಮೋತ್ಸವ ಸಮಿತಿಯ ಲೆಕ್ಕ ಪರಿಶೋಧ ಕರಾಗಿ ಹೆಚ್.ಎನ್. ನರಸಿಂಹಮೂರ್ತಿ ಹಾಗೂ ಸಲಹೆಗಾರರಾಗಿ ಚಿ.ನಾ. ಸೋಮೇಶ್ ನಿಯುಕ್ತಿಗೊಂಡಿದ್ದಾರೆ.