ಮಡಿಕೇರಿ, ನ. 13: ಇಲ್ಲಿಗೆ ಸಮೀಪದ ಕೊಪ್ಪದ ನಳಂದ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಅಂತರ ಶಾಲಾ ಹಾಕಿ ಪಂದ್ಯಾಟ ‘ಕನ್ವೆರ್ಜೆನ್ಸ್-2019’ ಅನ್ನು ತಾ. 8 ಹಾಗೂ 10 ರಂದು ಆಯೋಜಿಸಲಾಗಿತ್ತು.
ಕೊಡಗು ಹಾಗೂ ಮೈಸೂರು ಜಿಲ್ಲೆಗಳ 10 ಶಾಲೆಗಳ 17 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಪಂದ್ಯಾಟವನ್ನು ‘ಕಿಡ್ಸ್ಪ್ರಾನರ್’ ಸಂಸ್ಥೆಯ ಸಹ ಸ್ಥಾಪಕ ಕಳಸಲಿಂಗಮ್ ಉದ್ಘಾಟಿಸಿದ್ದರು. 17 ವರ್ಷದೊಳಗಿನ ವಿಭಾಗದಲ್ಲಿ ಡಿ.ವೈ.ಇ.ಎಸ್. ಕೂಡಿಗೆ ಪ್ರಥಮ ಸ್ಥಾನ ಹಾಗೂ ಕೊಡಗು ವಿದ್ಯಾಲಯ ದ್ವಿತೀಯ ಸ್ಥಾನ ಪಡೆದುಕೊಂಡರೆ, 14 ವರ್ಷದೊಳಗಿನ ವಿಭಾಗದಲ್ಲಿ ಡಿ.ವೈ.ಇ.ಎಸ್. ಕೂಡಿಗೆ ಪ್ರಥಮ ಸ್ಥಾನ ಹಾಗೂ ಮೊರಾರ್ಜಿ ದೇಸಾಯಿ ಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡಿತು.