ಸುಂಟಿಕೊಪ್ಪ, ನ. 13: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಗೋಣಿಕೊಪ್ಪದ ಲಯನ್ಸ್ ಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಕರಾಟೆ ಟೂರ್ನಿಯಲ್ಲಿ ಇಲ್ಲಿನ ಸಂತ ಮೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಕೆ.ಎಸ್. ಅಕ್ಷಯ್ ಬಾಲಕರ 17 ವರ್ಷದೊಳಗಿನ 45-50 ಕೆ.ಜಿ. ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಾ. 18 ರಿಂದ 20 ರವರೆಗೆ ಬೆಳಗಾವಿಯ ಜಿಲ್ಲಾ ಕ್ರೀಡಾ ವಸತಿ ನಿಲಯದಲ್ಲಿ ನಡೆಯುವ ರಾಜ್ಯಮಟ್ಟದ ಕರಾಟೆ ಟೂರ್ನಿಗೆ ಅಕ್ಷಯ್ ಆಯ್ಕೆಯಾಗಿದ್ದಾರೆ. ಪ್ರೌಢಶಾಲೆ ವಿಭಾಗದ 17 ವರ್ಷದೊಳಗಿನ 40-45 ಕೆ.ಜಿ. ವಿಭಾಗದ ಕರಾಟೆ ಟೂರ್ನಿಯಲ್ಲಿ ಇದೇ ಶಾಲೆಯ ವಿದ್ಯಾರ್ಥಿ ಬಿ.ಆರ್. ಮೋಕ್ಷಿತ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಪ್ರಾಥಮಿಕ ಶಾಲಾ ವಿಭಾಗದ 14 ವರ್ಷದೊಳಗಿನ 35-40 ಕೆ.ಜಿ. ವಿಭಾಗದಲ್ಲಿ ಬಿ.ಆರ್. ಆದಿತ್ಯ ತೃತೀಯ ಸ್ಥಾನ ಪಡೆದಿದ್ದಾರೆ. ಈ ವಿದ್ಯಾರ್ಥಿಗಳಿಗೆ ಶಾಲೆಯ ಕರಾಟೆ ಶಿಕ್ಷಕ ಬಿ.ಎಂ. ಮಣಿ ಮುಖೇಶ್ ತರಬೇತಿ ನೀಡಿದ್ದಾರೆ.