ಗೋಣಿಕೊಪ್ಪ ವರದಿ, ನ. 13: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ವೀರಾಜ ಪೇಟೆ, ಮಡಿಕೇರಿ, ಸೋಮವಾರಪೇಟೆ ತಾಲೂಕು ಯುವ ಒಕ್ಕೂಟಗಳ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಗಮನ ಸೆಳೆಯಿತು.
ವಿವಿಧ ಯುವಕ, ಯುವತಿಯ ರಿಂದ ರಾಗಿ ಬೀಸುವ ಪದ ಮತ್ತು ಸೋಬಾನೆ ಪದ, ಭಾವಗೀತೆ, ರಂಗಗೀತೆ, ಏಕಪಾತ್ರಾಭಿನಯ, ಗೀಗಿ ಪದ, ಕೋಲಾಟ, ಜಾನಪದ ನೃತ್ಯ, ಭಜನೆ, ಜನಪದ ಗೀತೆ ಮೂಡಿ ಬಂದವು.
ಫಲಿತಾಂಶ: ವೈಯಕ್ತಿಕ ವಿಭಾಗ: ಭಾವಗೀತೆ ವಿಭಾಗದ ಯುವಕರಲ್ಲಿ ಶ್ರೇಯಸ್ (ಪ್ರ), ಎಸ್.ಟಿ. ಗಿರೀಶ್ (ದ್ವಿ), ಸತೀಶ್, ಯುವತಿಯಲ್ಲಿ ಹೇಮ (ಪ್ರ), ಸೌಮ್ಯ ನಾಗೇಶ್ (ದ್ವಿ), ಪುತ್ತಾಮನೆ ವಿದ್ಯಾ ಜಗದೀಶ್ (ತೃ), ರಂಗಗೀತೆ ವೈಯಕ್ತಿಕ ವಿಭಾಗದ ಯುವಕರಲ್ಲಿ ಎಸ್.ಟಿ. ಗಿರೀಶ್ (ಪ್ರ), ಹೆಚ್.ಕೆ. ಮಹೇಶ್ (ದ್ವಿ), ಕೀರ್ತಿ ಕುಮಾರ್ (ತೃ), ಯುವತಿಯರಲ್ಲಿ ಲತಾ (ಪ್ರ), ಹೇಮಾ (ದ್ವಿ), ನಿರ್ಮಲಾ (ತೃ), ವೈಯಕ್ತಿಕ ಏಕಪಾತ್ರಾ ಭಿನಯ ಯುವಕರಲ್ಲಿ ಎಸ್.ಟಿ. ಗಿರೀಶ್ (ಪ್ರ), ಪ್ರವೀಣ್ (ದ್ವಿ), ಯುವತಿಯರಲ್ಲಿ ಸೌಮ್ಯ ನಾಗೇಶ್ (ಪ್ರ), ಲಾವಣಿ ಯುವಕರ ವಿಭಾಗದಲ್ಲಿ ಪ್ರವೀಣ್‍ಕುಮಾರ್ (ಪ್ರ), ಎಸ್.ಟಿ. ಗಿರೀಶ್ (ದ್ವಿ), ವಿಜಯ ಕುಮಾರ್ (ತೃ), ಯುವತಿಯರಲ್ಲಿ ಬಿ. ಟಿ. ಲತಾ (ಪ್ರ), ನಿರ್ಮಲಾ (ದ್ವಿ) ಬಹುಮಾನ ಪಡೆದುಕೊಂಡರು.
ಗುಂಪು ಸ್ಪರ್ಧೆ: ಗೀಗಿಪದ ಯುವಕರಲ್ಲಿ ಪೊನ್ನಂಪೇಟೆಯ ಜೈಭೀಮ್ ಯುವಕ ಸಂಘ (ಪ್ರ), ಗಂಧರ್ವ ಯುವಕ ಸಂಘ (ದ್ವಿ), ಸಂತೋಷ್ ಯುವಕ ಸಂಘ (ತೃ), ಯುವತಿಯರಲ್ಲಿ ನಿಸರ್ಗ ಯುವತಿ ಮಂಡಳಿ (ಪ್ರ), ಸ್ನೇಹಾ ಯುವತಿ ಮಂಡಳಿ (ದ್ವಿ), ಭಜನೆ ಯುವಕರಲ್ಲಿ ಗಂಧರ್ವ ಯುವಕ ಸಂಘ (ಪ್ರ), ಜೈಭೀಮ್ ಯುವಕ ಸಂಘ (ದ್ವಿ), ಸಂತೋಷ ಯುವಕ ಸಂಘ (ತೃ), ಯುವತಿಯರಲ್ಲಿ ನಿಸರ್ಗ ಯುವತಿ ಮಂಡಳಿ (ಪ್ರ), ಸ್ನೇಹ ಯುವತಿ ಮಂಡಳಿ (ದ್ವಿ) ಕೋಲಾಟದಲ್ಲಿ ಜೈಭೀಮ್ ಯುವಕ ಸಂಘ (ಪ್ರ), ಸಂತೋಷ ಯುವಕ ಸಂಘ (ದ್ವಿ), ಯುವತಿಯರಲ್ಲಿ ನಿಸರ್ಗ ಯುವತಿ ಮಂಡಳಿ (ಪ್ರ), ಜಾನಪದ ಗೀತೆಯಲ್ಲಿ ಗಂಧರ್ವ ಯುವಕ ಸಂಘ (ಪ್ರ), ಜೈಭೀಮ್ ಯುವಕ ಸಂಘ (ದ್ವಿ), ಇಂಡಿಯನ್ ಯುವಕ ಸಂಘ (ತೃ), ಯುವತಿಯರಲ್ಲಿ ನಿಸರ್ಗ ಯುವತಿ ಮಂಡಳಿ (ಪ್ರ), ಸ್ನೇಹ ಯುವತಿ ಮಂಡಳಿ (ದ್ವಿ), ರಾಗಿ ಬೀಸುವ ಸ್ಪರ್ಧೆಯ ಯುವತಿಯರಲ್ಲಿ ಸ್ನೇಹ ಯುವತಿ ಮಂಡಳಿ (ಪ್ರ), ನಿಸರ್ಗ ಯುವತಿ ಮಂಡಳಿ (ದ್ವಿ), ಸೋಬಾನೆ ಪದ ಯುವತಿಯರಲ್ಲಿ ಸ್ನೇಹ ಯುವತಿ ಮಂಡಳಿ (ಪ್ರ), ನಿಸರ್ಗ ಯುವತಿ ಮಂಡಳಿ (ದ್ವಿ) ಸ್ಥಾನ ಪಡೆದು ಕೊಂಡಿತು. ಈ ಸಂದರ್ಭ ಯುವ ಒಕ್ಕೂಟ ಅಧ್ಯಕ್ಷ ಪಿ.ಪಿ. ಸುಕುಮಾರನ್ ಇದ್ದರು.