ಮಡಿಕೇರಿ, ನ. 11: ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಉತ್ಥಾನ ದ್ವಾದಶಿ ಪ್ರಯುಕ್ತ; ಪ್ರತಿ ವರ್ಷದಂತೆ ಕಾರ್ತಿಕ ಮಾಸದಲ್ಲಿ ಜರುಗುವ ತುಳಸಿ ಪೂಜೆ ನೆರವೇರಿತು. ಅರ್ಚಕರುಗಳಾದ ಆದರ್ಶ್ ಭಟ್, ಅಕ್ಷರ ಭಟ್, ಪ್ರಸನ್ನ ಭಟ್ ಪೂಜಾ ಕೈಂಕರ್ಯ ನೆರವೇರಿಸಿದರು. ದೇವಾಲಯ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್, ಸದಸ್ಯ ಸುನಿಲ್ ಕುಮಾರ್ ಸಹಿತ ಇತರರು ಪಾಲ್ಗೊಂಡಿದ್ದರು.