ಮಡಿಕೇರಿ, ನ. 11: ಭಾರತೀಯ ರೈಲ್ವೇ ಇಲಾಖೆಯ ರೈಲ್ ವೀಲ್ ಪ್ಯಾಕ್ಟರಿ ಬೆಂಗಳೂರು ಅವರ ವತಿಯಿಂದ 2019-20ನೇ ಸಾಲಿನಲ್ಲಿ ಐ.ಟಿ.ಐ. ವೃತ್ತಿಯ ವಿವಿಧ ಟ್ರೇಡ್ಗಳಲ್ಲಿ ಶಿಶಿಕ್ಷು ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ತಾ. 15 ರೊಳಗೆ ದಿ ಸೀನಿಯರ್ ಪರ್ಸನಲ್ ಅಫೀಸರ್, ಪರ್ಸನಲ್ ಡಿಪಾರ್ಟ್ಮೆಂಟ್, ರೈಲ್ ವೀಲ್ ಪ್ಯಾಕ್ಟರಿ, ಯಲಹಂಕ ಬೆಂಗಳೂರು- 560064 ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್ನ ಮುಖಾಂತರ ಸಲ್ಲಿಸುವದು. ರಿಜಿಸ್ಟರ್ ಪೋಸ್ಟ್ ಕವರ್ ಮೇಲೆ ಅಪ್ಲಿಕೇಶನ್ ಪಾರ್ ಅಂಡರ್ಗೋಯಿಂಗ್ ಟ್ರೈನಿಂಗ್ ಅಂಡರ್ ದಿ ಅಪ್ರೆಂಟಿಸಸ್ ಆಕ್ಟ್ 1961 ಫಾರ್ ದಿ ಇಯರ್ 2019-20 ಇನ್ ರೈಲ್ ವೀಲ್ ಪ್ಯಾಕ್ಟರಿ ಎಂದು ತಪ್ಪದೇ ಬರೆದು ಸಲ್ಲಿಸಲು ತಿಳಿಸಿದೆ.
ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ನಿಂದ ಎಸ್ಎಸ್ಎಲ್ಸಿ ಅಥವಾ ತತ್ಸಮಾನ ವಿಷಯದಲ್ಲಿ ಕನಿಷ್ಟ ಶೇ. 50 ಅಂಕಗಳೊಂದಿಗೆ ತೇರ್ಗಡೆ ಹಾಗೂ ಸಂಸ್ಥೆಯ ವತಿಯಿಂದ ನೀಡಲಾಗುವ ತರಬೇತಿಯ ಟ್ರೇಡ್ನಲ್ಲಿ ಎನ್ಸಿವಿಟಿ ಯಿಂದ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.
ಐಟಿಐ ಫಿಟ್ಟರ್, ಮೆಶಿನಿಸ್ಟ್, ಮೆಕ್ಯಾನಿಕ್(ಮೋಟಾರ್ ವೆಹಿಕಲ್), ಟರ್ನರ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್ ಟ್ರೇಡ್ಗಳಿಗೆ 1 ವರ್ಷ ತರಬೇತಿ. ಸಿಎನ್ಸಿ ಪ್ರೋಗ್ರಾಮಿಂಗ್ ಕಮ್ ಆಪರೇಟರ್ (ಸಿಓಇ ಗ್ರೂಪ್) ಟ್ರೇಡ್ಗೆ ತರಬೇತಿಯು 6 ತಿಂಗಳ ಅವಧಿ ಆಗಿರುತ್ತದೆ. ತಾ. 15ಕ್ಕೆ ಅನ್ವಯವಾಗುವಂತೆ ಕನಿಷ್ಟ 15 ಹಾಗೂ ಗರಿಷ್ಠ 24 ವರ್ಷ. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷಗಳ ವಿನಾಯಿತಿ ಇರುತ್ತದೆ.
ಯಾವದೇ ರಾಷ್ಟ್ರೀಕೃತ ಬ್ಯಾಂಕ್ನಿಂದ ನೀಡಲಾದ ರೂ. 100 ಮೊತ್ತದ ಭಾರತೀಯ ಪೋಸ್ಟಲ್ ಆರ್ಡರ್, ಡಿಮಾಂಡ್ ಡ್ರಾಪ್ಟ್ನ್ನು ಪ್ರಿನ್ಸಿಪಾಲ್ ಪೈನಾನ್ಸಿಯಲ್ ಅಡ್ವೈಸರ್, ರೈಲ್ ವೀಲ್ ಪ್ಯಾಕ್ಟರಿ ಅವರ ಹೆಸರಿಗೆ ಪಡೆದು ಅರ್ಜಿಯೊಂದಿಗೆ ಲಗತ್ತಿಸುವದು. ಎಸ್.ಸಿ., ಎಸ್.ಟಿ, ಅಂಗವಿಕಲರು, ಮಹಿಳಾ ಅಭ್ಯರ್ಥಿಗಳಿಗೆ ಯಾವದೇ ಶುಲ್ಕ ಇರುವದಿಲ್ಲ.
ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡಿರಬೇಕು. ತರಬೇತಿಯ ಅವಧಿಯಲ್ಲಿ ಶಿಷ್ಯ ವೇತನವನ್ನು ನೀಡಲಾಗುವದು. ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಯನ್ನು ತಿತಿತಿ.ಡಿತಿಜಿ.iಟಿಜiಚಿಟಿಡಿಚಿiಟತಿಚಿಥಿs.gov.iಟಿ ರಿಂದ ಪಡೆಯಬಹುದಾಗಿದೆ ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ ಇಲ್ಲಿಂದ ಪಡೆಯಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.