ಮಡಿಕೇರಿ, ನ. 11: ಚೆಯ್ಯಂಡಾಣೆ, ಕೋಕೇರಿ, ಚೇಲಾವರ ಸುತ್ತಮುತ್ತ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ವೋಲ್ಟೇಜ್ ಸಮಸ್ಯೆಯಿಂದ ರಾತ್ರಿ ವೇಳೆ ಸಮಸ್ಯೆ ಎದುರಾಗಿದ್ದು; ಚೆಸ್ಕಾಂ ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ ಸಮಸ್ಯೆ ಇತ್ಯರ್ಥಗೊಳಿಸುವಂತೆ ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.
ಗ್ರಾಮಸ್ಥ ಚೆರುವಾಳಂಡ ರಾಜೇಶ್ ಸುಬ್ಬಯ್ಯ ಹಾಗೂ ಇತರರು ಈ ಬಗ್ಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರಿಗೆ ಮನವಿ ಸಲ್ಲಿಸುವದರೊಂದಿಗೆ; ಚೆಸ್ಕಾಂ ಸಿಬ್ಬಂದಿ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಸಮರ್ಪಕ ವಿದ್ಯುತ್ ಕಲ್ಪಿಸಲು ಸೂಚಿಸುವಂತೆ ಬೇಡಿಕೆಯಿತ್ತಿದ್ದಾರೆ.