ಸೋಮವಾರಪೇಟೆ, ನ. 11: ಇಲ್ಲಿನ ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಸಂಸ್ಥೆ ಅಧ್ಯಕ್ಷರಾಗಿ ಚೌಡ್ಲು ಗ್ರಾಮದ ನಿವಾಸಿ ಕವಿತಾ ವಿರೂಪಾಕ್ಷ ಆಯ್ಕೆಯಾದರು.
ಪಟ್ಟಣದ ಸಾಕ್ಷಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆ 318ರ ಅಧ್ಯಕ್ಷೆ ಅನುರಾಧ ನಂದಕುಮಾರ್ ಪದಗ್ರಹಣ ನೆರವೇರಿಸಿದರು.
ಕ್ಲಬ್ನ ಅಧ್ಯಕ್ಷೆ ಕವಿತಾ ವಿರೂಪಾಕ್ಷ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲಿ ಸಾಧಕ ಮಹಿಳೆಯರಿದ್ದಾರೆ. ಅಂತಹ ಮಹಾನ್ ಸಾಧಕರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಾಧನೆಯ ಹಾದಿಯಲ್ಲಿ ನಡೆಯಬೇಕು ಎಂದು ಹೇಳಿದರು.
ಇದೇ ಸಂದರ್ಭ ಶಿಕ್ಷಣ ಕ್ಷೇತ್ರದಲ್ಲಿನ ಸೇವೆಗಾಗಿ ವಿಶ್ವಮಾನವ ಕುವೆಂಪು ಶಾಲೆಯ ಮುಖ್ಯ ಶಿಕ್ಷಕಿ ಮಿಲ್ಫ್ರೆಡ್ ಗೋನ್ಸಾಲ್ವೆಸ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಇ.ಎಸ್.ಒ. ಸುಮನಾ ಭರತ್, ಕ್ಲಬ್ನ ಕಾರ್ಯದರ್ಶಿ ಸರಿತಾ ರಾಜೀವ್ ಇದ್ದರು. ಕ್ಲಬ್ನ ಸದಸ್ಯರಾದ ಅಮೃತ ಕಿರಣ್, ನಯನ ಪುರುಷೋತ್ತಮ್ ಕಾರ್ಯಕ್ರಮ ನಿರ್ವಹಿಸಿದರು. ಆಶಾ ಯೋಗೇಂದ್ರ ವಂದಿಸಿದರು.