ಮಡಿಕೇರಿ, ನ. 11: ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್, ಚಿಕ್ಕಮಗಳೂರು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇದರ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಜ್ಞಾನ ಭಾರತೀ ಸ್ಪೋಟ್ರ್ಸ್ ಕ್ಲಬ್ ಕೊಡಗು ತಂಡ ದ್ವಿತೀಯ ಬಹುಮಾನ ಹಾಗೂ ನಗದು ರೂ. 50 ಸಾವಿರ ಪಡೆದುಕೊಂಡಿದೆ. ಪ್ರಥಮ ಬಹುಮಾನವನ್ನು ವಿಜಯ ಬ್ಯಾಂಕ್ ತಂಡವು ನಗದು ರೂ. 1 ಲಕ್ಷ ಹಾಗೂ ಟ್ರೋಫಿಯನ್ನು ಪಡೆದುಕೊಂಡಿದೆ ಎಂದು ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಬಿ.ಡಿ. ಕಪಿಲ್‍ಕುಮಾರ್ ತಿಳಿಸಿದ್ದಾರೆ.