ಮಡಿಕೇರಿ, ನ.11: ವಿವಿಧ ಸಂಘ ಸಂಸ್ಥೆಗಳ ಹಾಗೂ ದಾನಿಗಳ ಸಹಕಾರದೊಂದಿಗೆ ನಗರದ ಅಶ್ವಿನಿ ಆಸ್ಪತ್ರೆಯಲ್ಲಿ 31ನೇ ವರ್ಷದ ಉಚಿತ ನೇತ್ರ ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ತಾ.13 ರಿಂದ 18ರವರೆಗೆ ನಡೆಯಲಿದೆ ಎಂದು ಆಸ್ಪತ್ರೆಯ ಟ್ರಸ್ಟಿಗಳು ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಟ್ರಸ್ಟಿ ಟಿ.ಆರ್.ಶೆಣೈ ಅವರು, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ರೋಟರಿ ಮಿಸ್ಟಿ ಹಿಲ್ಸ್, ರೋಟರಿ ಕುಶಾಲನಗರ, ರೋಟರಿ ಬೆಂಗಳೂರು ಸೌತ್, ರೋಟರಿ ಮಡಿಕೇರಿ, ಪಾಲಿಬೆಟ್ಟದ ದಿ ಕೂರ್ಗ್ ಫೌಂಡೇಷನ್, ಮಡಿಕೇರಿ ಮತ್ತು ನಾಪೋಕ್ಲು ಲಯನ್ಸ್ ಕ್ಲಬ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ದಾನಿಗಳ ಸಹಯೋಗದಲ್ಲಿ ಈ ಶಿಬಿರವನ್ನು ಆಯೋಜಿಸಲಾಗುತ್ತಿದೆ ಎಂದರು.ಅಶ್ವ್ವಿನಿ ಆಸ್ಪತ್ರೆಯ ದಶ ಮಾನೋತ್ಸವದ ಹಿನ್ನೆಲೆಯಲ್ಲಿ 1987 ರಲ್ಲಿ ಮಡಿಕೇರಿ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಆರಂಭಿಸಲಾದ ಈ ವಾರ್ಷಿಕ ನೇತ್ರ ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಪ್ರತಿ ವರ್ಷ 4 ರಿಂದ 5 ಸಾವಿರ ಮಂದಿಯ ನೇತ್ರ ತಪಾಸಣೆ ಮಾಡಿ, ಸರಾಸರಿ 300 ಕ್ಕೂ ಹೆಚ್ಚಿನ ಶಸ್ತ್ರ ಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗುತ್ತಿದೆ. ಅಲ್ಲದೆ, (ಮೊದಲ ಪುಟದಿಂದ) ಅಗತ್ಯವಿರುವವರಿಗೆ ಐಓಎಲ್(ಒಳ ಮಸೂರ)ವನ್ನು ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.ತಾ. 13 ಮತ್ತು 14 ರಂದು ಕೊಡಗು ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶÀಗಳಲ್ಲಿ ಹಾಗೂ ನೆರೆಯ ಪಿರಿಯಾಪಟ್ಟಣ ಮತ್ತು ಹಾಸನ ಜಿಲ್ಲೆಯ ಗಡಿಭಾಗಗಳಲ್ಲಿನ ಬೈಲುಕೊಪ್ಪ, ಬೆಟ್ಟದಪುರ, ಚಿಕ್ಕನೇರಳೆÉ. ಚಪ್ಪರದ ಹಳ್ಳಿ, ಹಲಗನ ಹಳ್ಳಿ, ಕಣಗಾಲು, ಅತ್ತಿಗೂಡು, ಕೆಲಗನಹಳ್ಳಿ, ಎನ್. ಶೆಟ್ಟಳ್ಳಿ, ರಾವಂದೂರು, ಮಾಕೋಡು, ಕೊಪ್ಪ, ಸಂಗರಶೆಟ್ಟಳ್ಳಿ, ಚೆನ್ನಂಗೆರೆ, ಮರದೂರು ಗೇಟ್, ಹಾಡ್ಯ, ಕಿತ್ತೂರು, ತಮ್ಮಡಹಳ್ಳಿ, ಕೆಲ್ಲೂರು, ಆವರ್ತಿ ಸೇರಿದಂತೆ 55 ಸ್ಥಳಗಳಲ್ಲಿ ನೇತ್ರ ತಪಾಸಣೆ ನಡೆಸಲಾಗುವದು . ಈ ಸಂದರ್ಭ ಶಸ್ತ್ರಚಿಕಿತ್ಸೆಯ ಅಗತ್ಯವಿರುವವರನ್ನು ಗುರುತಿಸಿ ಅವರನ್ನು ಮಡಿಕೆÉೀರಿ ಅಶ್ವ್ವಿನಿ ಆಸ್ಪತ್ರೆಗೆ ಕರೆ ತಂದು ಅಗತ್ಯ ಪರೀಕ್ಷೆಗಳನ್ನು ಮಾಡಿ, ನಂತರ ಶಸ್ತ್ರ ಚಿಕಿತ್ಸೆ ನಡೆಸಲಾಗುವದು. ಶಿಬಿರಾರ್ಥಿಗಳಿಗೆ ಮತ್ತು ಅವರ ಒಬ್ಬರು ಸಹಾಯಕರಿಗೆ ಉಚಿತ ಊಟೋಪಚಾರವನ್ನು ನೀಡಲಾಗುವದು ಎಂದರು.

ಶಿಬಿರದಲ್ಲಿ ಸಣ್ಣ ಮಕ್ಕಳಲ್ಲಿ ಕಣ್ಣಿನ ಪೊರೆ ಸಮಸ್ಯೆಗಳು ಕಂಡು ಬಂದಲ್ಲಿ ಅಂತಹ ಮಕ್ಕಳಿಗೆ ಹಾಸನದಲ್ಲಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಡಲಾಗುವದು. ಶಿಬಿರದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಎಲ್ಲರಿಗೂ 45 ದಿನಗಳ ಅವಧಿಗೆ ಔಷಧಿಯನ್ನು ಉಚಿತವಾಗಿ ನೀಡಲಾಗುವದು ಮತ್ತು ಮುಂದಿನ ಪರೀಕ್ಷೆಯ ಕುರಿತು ಅಗತ್ಯ ಮಾಹಿತಿಯನ್ನು ಒದಗಿಸಿ ಕೊಡಲಾಗುತ್ತದೆ. ಶಿಬಿರಕ್ಕೆ ಬರುವವರು ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು.

ತಾ.15 ರಂದು ಬೆಳಗ್ಗೆ 11 ಗಂಟೆಗೆ ಶಿಬಿರದ ಉದ್ಘಾಟನೆ ಅಶ್ವ್ವಿನಿ ಆಸ್ಪತ್ರೆಯಲ್ಲಿ ನಡೆಯಲಿದ್ದು, ತಾ.18 ರಂದು ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಶೆಣೈ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಟ್ರಸ್ಟಿ ಎಂ.ಸಿ.ಗೋಖಲೆ ಹಾಗೂ ಮೇಲ್ವಿಚಾರಕ ಬಿ.ಎ.ರವೀಂದ್ರ ಕುಮಾರ್ ಉಪಸ್ಥಿತರಿದ್ದರು.