ನಾಪೆÇೀಕ್ಲು, ನ. 11: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಹುದಿಕೇರಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ತ್ರಿವೇಣಿ ಮಹಿಳಾ ಸಮುದಾಯ ಭವನದಲ್ಲಿ ರೈತ ಕ್ಷೇತ್ರ ಪಾಠ ಶಾಲೆ ತರಬೇತಿ ಅಡಿಯಲ್ಲಿ ಸಾವಯವ ಕೃಷಿ ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮವನ್ನು ಒಕ್ಕೂಟದ ಅಧ್ಯಕ್ಷೆ ಊರ್ಮಿಳಾ ಸೋಮಯ್ಯ ಉದ್ಘಾಟಿಸಿದರು. ಕೆವಿಕೆಯ ವಿಷಯ ತಜ್ಞ ಡಾ. ಸೋಮಶೇಖರ್ ಸಾವಯವ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ತಾಲೂಕು ಕೃಷಿ ಮೇಲ್ವಿಚಾರಕ ಚೇತನ್ ಕೆ, ವಲಯ ಮೇಲ್ವಿಚಾರಕ ಶ್ರೀನಿವಾಸ್, ಸೇವಾಪ್ರತಿನಿಧಿ ಸುನಿತಾ, ರೈತ ಸದಸ್ಯರು ಇದ್ದರು.