ಕುಶಾಲನಗರ, ನ. 11: ಜಿಲ್ಲಾ ವೀರಶೈವ ಮಹಾಸಭೆಯ ವತಿಯಿಂದ ಕುಶಾಲನಗರದ ಹೆಚ್.ಆರ್.ಪಿ. ಕಾಲೋನಿಯಲ್ಲಿರುವ ಒಳ ಕ್ರೀಡಾಂಗಣದಲ್ಲಿ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಮಹಾಸಭೆಯ ಅಧ್ಯಕ್ಷ ಹೆಚ್.ವಿ. ಶಿವಪ್ಪ, ಪ್ರಧಾನ ಕಾರ್ಯದರ್ಶಿ ಟಿ.ಎಸ್. ಶಾಂಭಮೂರ್ತಿ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ. ಮಹಾದೇವಪ್ಪ, ಕ್ರೀಡಾಕೂಟದ ಸಂಚಾಲಕ ಟಿ.ಎಸ್. ಶಶಿಕುಮಾರ್, ಉದಯಕುಮಾರ್, ಅನು, ಬಾಳೆಲೆ ರಘು, ಡಿ.ಎನ್. ಚಂದ್ರಶೇಖರ್, ಬಸವರಾಜ್ ಮತ್ತಿತರರು ಇದ್ದರು.