ಮಡಿಕೇರಿ, ನ. 11: ಪ್ರಸಕ್ತ ಸಾಲಿನಲ್ಲಿ 1000 ಪ.ಜಾತಿ ವಿದ್ಯಾರ್ಥಿಗಳಿಗೆ ಭದ್ರತಾಪಡೆ, ಸೇನಾಪಡೆ, ಅರೆಸೇನಾಪಡೆ, ಪೊಲೀಸ್ಪಡೆ, ಅಗ್ನಿ ಶಾಮಕ, ಅರಣ್ಯ ವಿದ್ಯುತರ, ಗೃಹರಕ್ಷಕ, ಸಾರಿಗೆ ಮೊದಲಾದ ಸೇವೆಗಳಲ್ಲಿ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಉಚಿತವಾಗಿ 2 ತಿಂಗಳು ಪ್ರೀ ಮಿಲಿಟರಿ ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಎಸ್ಎಸ್ಎಲ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿದ್ದು ಕನಿಷ್ಟ ಶೇ. 40 ಅಂಕಗಳನ್ನು ಪಡೆದಿರಬೇಕು. ನಿಗದಿತ ವಿದ್ಯಾರ್ಹತೆಯ ಅಂಕ ಪಟ್ಟಿಯನ್ನು ಸರ್ಕಾರದಿಂದ ಅನುಮೋದಿತಗೊಂಡ ಶಿಕ್ಷಣ ಮಂಡಳಿಯಿಂದ ಪಡೆದಿರಬೇಕು. ಮುಕ್ತ ವಿಶ್ವ ವಿದ್ಯಾಲಯ ಮತ್ತು ಇತರ ಯಾವದೇ ಸರ್ಕಾರದಿಂದ ಅಂಗೀಕೃತವಲ್ಲದ ಸಂಸ್ಥೆಗಳಿಂದ ಪಡೆದ ಅಂಕ ಪಟ್ಟಿಯನ್ನು ಪರಿಗಣಿಸುವದಿಲ್ಲ.
ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಅನುಸೂಚಿತ ಜಾತಿ ಮತ್ತು ಅನುಸೂಚಿತ ವರ್ಗಕ್ಕೆ ಸೇರಿದ ಜಾತಿ ಪಟ್ಟಿಯಲ್ಲಿರುವ ಜಾತಿಗೆ ಸೇರಿರತಕ್ಕದ್ದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರತಕ್ಕದು. ಅರ್ಜಿ ಸಲ್ಲಿಸಲು ತಾ. 23 ಕೊನೆಯ ದಿನ. ಅರ್ಜಿಯನ್ನು ತಿತಿತಿ.sತಿ.ಞಚಿಡಿ.ಟಿiಛಿ.iಟಿ ನಲ್ಲಿ ಸಲ್ಲಿಸಬೇಕು. ಅರ್ಜಿಯನ್ನು Pಡಿe.miಟiಣಚಿಡಿಥಿ.ಠಿeಣಛಿ@gmಚಿiಟ.ಛಿom ವಿಳಾಸಕ್ಕೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗೆ ಇಲಾಖಾ ವೆಬ್ಸೈಟ್ ತಿತಿತಿ.sತಿ.ಞಚಿಡಿ.ಟಿiಛಿ.iಟಿ ಹಾಗೂ ಉಪನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಕೊಡಗು ಜಿಲ್ಲೆ, ಮಡಿಕೇರಿ 08272-225531, ಸಹಾಯಕ ನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ ಮಡಿಕೇರಿ 08272-223552, ಸಮಾಜ ಕಲ್ಯಾಣ ಇಲಾಖೆ ಸೋಮವಾರಪೇಟೆ 08276-281115, ಸಹಾಯಕ ನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ, ಪೊನ್ನಂಪೇಟೆ 08274-249476 ನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.