‘ಏಕ್ ಭಾರತ್ ಶ್ರೇಷ್ಠ್ ಭಾರತ್’ ಕಾರ್ಯಕ್ರಮ

ಸ್ನೇಹವನ್ನು ಸಂಪಾದಿಸುವದರ ಮೂಲಕ ಒಗ್ಗಟ್ಟಿಗೆ ಅವಕಾಶವನ್ನು ಕಲ್ಪಿಸಿಕೊಡಬೇಕು ಎಂದರು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಮುಖ್ಯ ಶಿಕ್ಷಕ ಸೋಮಯ್ಯ, ಉತ್ತರಖಂಡ ರಾಜ್ಯ ಮತ್ತು ಕರ್ನಾಟಕ ಸಮಾನವಾದ ಸಂಸ್ಕೃತಿಯನ್ನು ಹೊಂದಿವೆ. ಇವೆರಡರ ನಡುವಿನ ಬಾಂಧವ್ಯ ಅತ್ಯಂತ ಸುಮಧುರವಾಗಬೇಕಾದರೆ ಅದು ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್, ವೈವಿಧ್ಯತೆಯಿಂದ ಕೂಡಿರುವ ನಮ್ಮ ದೇಶ ಬಹು ಪ್ರಾಚೀನ ಕಾಲದಿಂದಲೂ ತನ್ನದೆ ಆದ ಏಕತೆಯನ್ನು ಉಳಿಸಿಕೊಂಡು ಬಂದಿದೆ ಎಂದರು.

ವೇದಿಕೆಯಲ್ಲಿ ಉಪನ್ಯಾಸಕರಾದ ಕೆ.ಕೆ. ಭವಾನಿ, ಎಚ್.ಆರ್. ಶಿವಕುಮಾರ್, ಕೆ.ಎ. ವೀಣಾ, ವೆಂಕಟೇಶ್, ಸರೋಜಾ, ಅಭಿಲಾಷಾ, ಸೈಯದ್ ಮುನೀರ್ ಮೊದಲಾದವರು ಇದ್ದರು. ವಿದ್ಯಾರ್ಥಿ ನಾಯಕ ಪುನೀತ್ ಕುಮಾರ್, ಶರತ್, ಆನಂದ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.