ಚೆಟ್ಟಳ್ಳಿ, ನ. 10: ಕೊಡಗು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಖವಾಲಿ ಸ್ಪರ್ಧೆಯಲ್ಲಿ ಅನ್ವಾರುಲ್ ಹುದಾ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳ ತಂಡವು ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಮುಖ್ಯ ಶಿಕ್ಷಕರಾದ ಚಂದ್ರಕುಮಾರ್ ವೀರಾಜಪೇಟೆ, ಕಾರ್ಯದರ್ಶಿ ಲಿಯಾಕತ್ ಅಲಿ ಗುಂಡಿಕೆರೆ, ವ್ಯವಸ್ಥಾಪಕರಾದ ಶಾಫಿ ಅನ್ವಾರಿ ಕೊಡಗರಹಳ್ಳಿ ಮತ್ತು ಶಿಕ್ಷಕರಾದ ಇಬ್ರಾಹೀಂ ಕೊಂಡಂಗೇರಿ, ಶಕೀರ್ ಪೊನ್ನತ್ಮೊಟ್ಟೆ ಉಪಸ್ಥಿತರಿದ್ದರು.