ಶನಿವಾರಸಂತೆ, ನ. 10: ಪಟ್ಟಣದ ಶ್ರೀ ಬೀರಲಿಂಗೇಶ್ವರ ಪ್ರಬಲ ಭೈರವಿ ದೇವಸ್ಥಾನ ಸಮಿತಿ ವತಿಯಿಂದ ಶ್ರೀಬೀರಲಿಂಗೇಶ್ವರ ಪ್ರಬಲ ಭೈರವಿ ದೇವಿ ಮತ್ತು ಪರಿವಾರ ದೇವರುಗಳ ಪ್ರಥಮ ವಾರ್ಷಿಕೋತ್ಸವ ತಾ. 17 ಮತ್ತು 18 ರಂದು ನಡೆಯಲಿದೆ.

ತಾ. 17 ರಂದು ಬೆಳಿಗ್ಗೆ 9 ಗಂಟೆಗೆ ಮಧ್ಯಪೇಟೆಯ ಶ್ರೀಗಣಪತಿ- ಪಾರ್ವತಿ- ಚಂದ್ರಮೌಳೇಶ್ವರ ದೇವಾಲಯದಲ್ಲಿ ಸರ್ವಧರ್ಮ ಗ್ರಾಮಸ್ಥರಿಂದ ಪ್ರಾರ್ಥನೆ ಮತ್ತು ಮಂಗಳಾರತಿ ನಡೆಯಲಿದೆ. 10 ಗಂಟೆಯಿಂದ ಬಿದರೂರು ಗ್ರಾಮದ ಊರೊಡೆಯ ದೇವರು, ಬ್ರಹ್ಮದೇವರು, ಬಸವೇಶ್ವರ ದೇವರ ಮಹಾಪೂಜೆ, ಹೆಮ್ಮನೆ ಗ್ರಾಮದ ಮಾರಿಯಮ್ಮ ದೇವರು, ಬಸವೇಶ್ವರ ದೇವರ ಮಹಾಪೂಜೆ, ತ್ಯಾಗರಾಜ ಕಾಲೋನಿ ಶ್ರೀವಿಜಯ ವಿನಾಯಕ ದೇವರು, ಶ್ರೀ ಚಾಮುಂಡೇಶ್ವರಿ ದೇವಿಯ ಮಹಾ ಪೂಜೆ, ಶ್ರೀರಾಮ ಮಂದಿರದ ರಾಮ ದೇವರ ಮಹಾಪೂಜೆ, ಜಾಮೀಯ ಮಸೀದಿಯಲ್ಲಿ ಪ್ರಾರ್ಥನೆ ನಡೆಯಲಿದೆ. ನಂತರ ಶ್ರೀ ಬೀರ ಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಪೂಜೆ, ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗವಿರುತ್ತದೆ. ತಾ. 18 ರಂದು ಸಹಕಾರ ಬ್ಯಾಂಕಿನ ಬಳಿಯಿಂದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದವರೆಗೆ ಗೋಪೂಜೆ, ಗಂಗೆಪೂಜೆ, ಕಳಶಕುಂಭ ಮೆರವಣಿಗೆ, ಶ್ರೀ ಬೀರಲಿಂಗೇಶ್ವರ ಸ್ವಾಮಿ ಹಾಗೂ ಪ್ರಬಲ ಭೈರವಿ ದೇವರುಗಳ ಫಲ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಗಣಪತಿ, ಮೃತ್ಯುಂಜಯ, ದುರ್ಗಾ ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಂತರ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30 ರಿಂದ ಸಭಾ ಕಾರ್ಯಕ್ರಮ. 7.30 ರಿಂದ ಶ್ರೀ ಬೀರಲಿಂಗೇಶ್ವರ ದೇವರಿಗೆ ಬಿಲ್ವಾರ್ಚನೆ ಪ್ರಬಲ ಭೈರವಿ ದೇವಿಗೆ ಹರಿದ್ರಾ ಅರ್ಚನೆ, ವಿವಿಧ ಬಗೆಯ ಆರತಿಗಳು, ತೀರ್ಥ ಪ್ರಸಾದ ವಿನಿಯೋಗ ನಂತರ ಅನ್ನಸಂತರ್ಪಣೆ ನಡೆಯುತ್ತದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.